ಕೂದಲ ಆರೋಗ್ಯಕ್ಕೆ ಕೆಲವು ಉಪಾಯಗಳು

ಶುಕ್ರವಾರ, 9 ಜೂನ್ 2017 (08:29 IST)
ಬೆಂಗಳೂರು: ತಲೆ ಕೂದಲ ರಕ್ಷಣೆ ಎನ್ನುವುದು ತಲೆನೋವಿನ ವಿಷಯವೇ. ಸುಂದರ, ಹೊಳೆಯುವ ಕೂದಲು ನಿಮ್ಮದಾಗಬೇಕಾದರೆ ಮನೆ ಮದ್ದು ಏನೇನಿದೆ ನೋಡೋಣ.

 
ಮಜ್ಜಿಗೆ
ಹೌದು. ಮಜ್ಜಿಗೆ ನಿಮ್ಮ ತಲೆ ಕೂದಲುಗಳಿಗೆ ಉತ್ತಮ ಕಂಡೀಷನರ್ ಆಗಿ ಕೆಲಸ ಮಾಡಬಹುದು. ಮಜ್ಜಿಗೆಯನ್ನು ತಲೆಕೂದಲುಗಳಿಗೆ ಹಚ್ಚಿಕೊಂಡು 20 ನಿಮಿಷ ಹಾಗೇ ಬಿಡಿ. ನಂತರ ಉತ್ತಮ ಶ್ಯಾಂಪೂ ಬಳಸಿ ತೊಳೆದುಕೊಂಡರೆ ಕೂದಲಿಗೆ ಹೊಳಪು ಬರುತ್ತದೆ.

ಮೊಟ್ಟೆ
ಮೊಟ್ಟೆ ಕೂದಲಿಗೆ ಬಳಸುವ ಉಪಾಯ ಎಲ್ಲರಿಗೂ ಗೊತ್ತಿರುವುದೇ. ಒದ್ದೆ ಕೂದಲಿಗೆ ಮೊಟ್ಟೆಯ ಹಳದಿ ಭಾಗವನ್ನು ಹಾಕಿಕೊಂಡು 15 ನಿಮಿಷ ಬಿಟ್ಟು ಸ್ನಾನ ಮಾಡಿ.

ಅಲ್ಯುವೀರಾ ಮತ್ತು ಜೇನು ತುಪ್ಪ
ಅಲ್ಯುವೀರಾ ಕೂದಲು ಬೆಳವಣಿಗೆಗೆ ಉತ್ತಮ. ಹಾಗೆಯೇ ಕಂಡೀಷನರ್ ಆಗಿಯೂ ಕೆಲಸ ಮಾಡುತ್ತದೆ. ಜೇನು ತುಪ್ಪ ಕೂದಲಿಗೆ ಹೊಳಪು ನೀಡುತ್ತದೆ. ಇವೆರಡನ್ನು ಕೂದಲಿಗೆ ಹಚ್ಚಿಕೊಂಡು 10 ರಿಂದ 15 ನಿಮಿಷ ಬಿಡಿ. ಕೇಶಕ್ಕೆ ಹೊಸ ಮೆರುಗು ಬರುತ್ತದೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ