ಮಿಸ್ಟರ್ ಇಂಡಿಯಾ 2018ಗೆ ದಕ್ಷಿಣ ಭಾರತದಿಂದಸೌಂ ಐವರು ಆಯ್ಕೆ

ಸೋಮವಾರ, 8 ಅಕ್ಟೋಬರ್ 2018 (16:21 IST)
ಮಿಸ್ಟರ್ ಇಂಡಿಯಾ ಸ್ಪರ್ಧೆಗೆ ದಕ್ಷಿಣ ಭಾರತದಿಂದ ಐವರು ಯುವ ಮಾಡೆಲ್ ಗಳು ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಝೋನ್ ದಿ ಪಾರ್ಕ್ ಹೋಟೆಲ್ ನಲ್ಲಿ ನಡೆದ ಮ್ಯಾನ್ ಹಂಟ್ ಆಯ್ಕೆ ಪ್ರಕ್ರಿಯೆಯಲ್ಲಿ ದಕ್ಷಿಣ ಭಾರತದ ಹೈದರಾಬಾದ್, ಬೆಂಗಳೂರು, ಕೊಚ್ಚಿ, ಚೆನೈನಿಂದ ಆಗಮಿಸಿದ್ದ ಪುರುಷ ಮಾಡೆಲ್ ಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
 
ಅಭಿನಿತ್ ಸಿನ್ಹ, ಪ್ರಸಾದ್ ಕಾರ್ಯಪ್ಪ, ಆರ್. ಅರ್ಜುನ್, ನಿತೇಶ್ ಗರ್ಗ್, ಪುನೀತ್ ಅಗರವಾಲ್ ರಾಷ್ಟ್ರೀಯ ಮಟ್ಟದ ಮ್ಯಾನ್ ಹಂಟ್‌ಗೆ ಆಯ್ಕೆಯಾಗಿದ್ದಾರೆ.
 
ದಕ್ಷಿಣ ಭಾರತದಲ್ಲಿಯೇ ಪ್ರಥಮಬಾರಿಗೆ ನಡೆದ ಪುರುಷ ಫ್ಯಾಶನ್ ಶೋ ದಲ್ಲಿ ಮಾಡೆಲ್‌ಗಳು ರ‍್ಯಾಂಪ್ ಮೇಲೆ ವಾಕ್  ಮಾಡುವುದಷ್ಟೇಯಲ್ಲದೇ ತೀರ್ಪುಗಾರರು ಕೇಳಿದ ಕ್ಲಿಷ್ಟ ಪ್ರಶ್ನೆಗಳಿಗೆ ಜಾಣ್ಮೆಯ ಉತ್ತರ ನೀಡಿ ತೀರ್ಪುಗಾರರ ಮನ ಗೆದ್ದರು.
 
ದಕ್ಷಿಣದಿಂದ ಆಯ್ಕೆಯಾದ ಐವರು ಯುವ ಮಾಡೆಲ್ ಗಳು ದೆಹಲಿಯಲ್ಲಿ ಅಕ್ಟೋಬರ್ 25-27 ರಂದು ನಡೆಯುವ ರಾಷ್ಟ್ರೀಯ ಮಟ್ಟದ  ಮ್ಯಾನ್ ಹಂಟ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
 
ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಮ್ಯಾನ್ ಹಂಟ್ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಮಾಡೆಲ್‌ಗಳು ನವೆಂಬರ್ 26 ರಿಂದ ಡಿಸೆಂಬರ್ 2 ರ ವರೆಗೆ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುವ ಅಂತಿಮ ಹಂತದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
 
ಮೂವತ್ತು ವರ್ಷಗಳ ಇತಿಹಾಸ
 
ಮೂವತ್ತು ವರ್ಷಗಳ ಹಿಂದೆ ಪುರುಷ ಮಾಡಲ್ ಗಳಿಗಾಗಿ ಆರಂಭವಾಗಿದ್ದ  ಮ್ಯಾನ್ ಹಂಟ್‌ಗೆ ಇದೇ ಮೊದಲಬಾರಿ ಬೆಂಗಳೂರು ಸಾಕ್ಷಿಯಾಗಿದೆ. ಕಳೆದ ಮೂರು ದಶಕಗಳಿಂದ ಈ ವೇದಿಕೆಯು ಪುರುಷ ಮಾಡಲ್‌ಗಳಿಗೆ ಅದ್ಭುತ ಅವಕಾಶಗಳನ್ನು ಕಲ್ಪಿಸಿಕೊಟ್ಟೆದೆ. ಬಾಲಿವುಡ್ ಜಗತ್ತಿನಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಜಾನ್ ಇಬ್ರಾಹಿಂ, ಡಿನೋ ಮೊರಿಯಾ,  ರಾಜಿವ್ ಸಿಂಗ್ ಇದೇ ವೇದಿಕೆಯಿಂದ ಹೊರಹೊಮ್ಮಿದ ಪ್ರತಿಭೆಗಳು. ಇಂತಹ ಕಾರ್ಯಕ್ರಮವನ್ನು ಆಯೋಜಿಸಲು ನಮಗೆ ಹೆಮ್ಮೆಯೆನಿಸಿದೆ ಎಂದು ದಕ್ಷಿಣ ಭಾರತ ಮ್ಯಾನ್ ಹಂಟ್ ಫ್ಯಾಶನ್ ಶೋ ಮುಖ್ಯಸ್ಥೆ ಪ್ರತಿಭಾ ಸಂಶಿಮಠ ಹೇಳಿದ್ದಾರೆ.
 
ಫ್ಯಾಶನ್ ಶೋ ತೀರ್ಪುಗಾರರಾಗಿ ದೆಹಲಿಯ ದೀಪಾಲಿ ಫಡ್ನವಿಸ್ ಆಗಮಿಸಿದ್ದರು.
 
ಹೆಚ್ಚಿನ ಮಾಹಿತಿಗಾಗಿ :  ದೀಪಕ್ - 8660605954

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ