ಮುಖದ ಮೇಲಿರುವ ಅನಾವಶ್ಯಕ ಕೂದಲನ್ನು ಶಾಶ್ವತವಾಗಿ ನಿವಾರಿಸಿಕೊಳ್ಳಲು ಈ ಪ್ಯಾಕ್ ಹಚ್ಚಿ

ಶುಕ್ರವಾರ, 15 ನವೆಂಬರ್ 2019 (09:51 IST)
ಬೆಂಗಳೂರು : ಮುಖದ ಮೇಲಿರುವ ಅನಾವಶ್ಯಕ ಕೂದಲು ನಿಮಗೆ ಮುಜುಗರವನ್ನುಂಟು ಮಾಡುತ್ತದೆ. ಈ ಕೂದಲನ್ನು ತೆಗೆಯಲು ಯಾವುದೇ ಕ್ರೀಂಗಳನ್ನು ಬಳಸಿದರೂ ಅದು ಮತ್ತೆ ಮತ್ತೆ ಹುಟ್ಟುತ್ತಿರುತ್ತದೆ. ಅದರ ಬದಲು ಈ ಮನೆಮದ್ದಿನಿಂದ ಈ ಕೂದಲನ್ನು ಶಾಶ್ವತವಾಗಿ ನಿವಾರಿಸಿಕೊಳ್ಳಿ.




ಕಾರ್ನ್ ಪ್ಲೋರ್ 2 ಟೇಬಲ್ ಸ್ಪೂನ್, 1 ಟೇಬಲ್ ಸ್ಪೂನ್ ಕಸ್ತೂರಿ ಅರಶಿನ, ಎರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ಬಳಿಕ ಒಂದು ಪಾತ್ರೆಗೆ ಹಾಕಿ ಅದಕ್ಕೆ ನೀರನ್ನು ಹಾಕಿ 2 ನಿಮಿಷ ಕುದಿಸಿ. ಬಳಿಕ ಈ ಮಿಶ್ರಣವನ್ನು ಮುಖದ ಮೇಲೆ ಕೂದಲಿರುವ ಸ್ಥಳಗಳಲ್ಲಿ ಹಚ್ಚಿ. 15 ನಿಮಿಷ ಬಿಟ್ಟು ಮುಖಕ್ಕೆ ಹಚ್ಚಿದ ಪೇಸ್ಟ್ ನ್ನು ಕಿತ್ತು ತೆಗೆಯಿರಿ. ಇದರಿಂದ ಕೂದಲುಗಳು ಹೋಗುತ್ತವೆ. ಬಳಿಕ ತಣ್ಣೀರಿನಿಂದ ಮುಖವನ್ನು ವಾಶ್ ಮಾಡಿ. ಹೀಗೆ ವಾರದಲ್ಲಿ 2 ಬಾರಿ ಇದನ್ನು ಮಾಡುತ್ತಾ ಬಂದರೆ ಅನಾವಶ್ಯಕ ಕೂದಲು ಮತ್ತೆ ಹುಟ್ಟುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ