ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

Krishnaveni K

ಸೋಮವಾರ, 6 ಅಕ್ಟೋಬರ್ 2025 (11:52 IST)
ದೀಪಾವಳಿ ಹಬ್ಬ ಹತ್ತಿರ ಬರುತ್ತಿದ್ದು, ಸಿಹಿ ತಿನಿಸು ಮಾಡಲು ಪ್ಲ್ಯಾನ್ ಮಾಡಿಕೊಂಡಿರುತ್ತೀರಿ. ದೀಪಾವಳಿಗೆ ಹೆಚ್ಚಾಗಿ ಎಲ್ಲರೂ ಸುಲಭವಾಗಿ ಗುಲಾಬ್ ಜಾಮೂನು ಮಾಡುತ್ತಾರೆ. ಖೋವಾ ಬಳಸಿ ಗುಲಾಬ್ ಜಾಮೂನು ಮಾಡುವುದು ಹೇಗೆ ಇಲ್ಲಿದೆ ನೋಡಿ ರೆಸಿಪಿ.

ಸಾಮಾನ್ಯವಾಗಿ ಗುಲಾಬ್ ಜಾಮೂನು ಪೌಡರ್ ತಂದು ಮನೆಯಲ್ಲಿ ಸುಲಭವಾಗಿ ಜಾಮೂನು ಮಾಡಿಕೊಳ್ಳುತ್ತೇವೆ. ಅದಲ್ಲದೇ ಸ್ವಲ್ಪ ಡಿಫರೆಂಟ್ ಆಗಿ ಮಾಡೋಣ ಎಂದರೆ ಖೋವಾ, ಮೈದಾ ಹಿಟ್ಟು ಬಳಸಿ ಮನೆಯಲ್ಲಿಯೇ ಗುಲಾಬ್ ಜಾಮೂನು ಹಿಟ್ಟು ರೆಡಿ ಮಾಡಬಹುದು. ಇದರ ರುಚಿಯೂ ಹೆಚ್ಚು.

ಬೇಕಾಗುವ ಸಾಮಗ್ರಿಗಳು
1 ಕಪ್ ಖೋವಾ
2 ಸ್ಪೂನ್ ಮೈದಾ
ಅರ್ಧ ಟೇಬಲ್ ಸ್ಪೂನ್ ಏಲಕ್ಕಿ ಪುಡಿ
ಹಾಲು
ಸಕ್ಕರೆ
ಕರಿಯಲು ಎಣ್ಣೆ
ಕೇಸರಿ, ಏಲಕ್ಕಿ

ಮಾಡುವ ವಿಧಾನ
1 ಕಪ್ ಖೋವಾವನ್ನು ಬೌಲ್ ಗೆ ಹಾಕಿಕೊಳ್ಳಿ. ಇದಕ್ಕೆ ಎರಡು ಸ್ಪೂನ್ ಮೈದಾ ಹಿಟ್ಟು, ಅರ್ಧ ಟೇಬಲ್ ಸ್ಪೂನ್ ಏಲಕ್ಕಿ ಸೇರಿಸಿ ಚೆನ್ನಾಗಿ ಕಲಸಿ. ಕಲಸುವಾಗ ನಡು ನಡುವೆ ಸ್ವಲ್ಪವೇ ಹಾಲು ಮಿಕ್ಸ್ ಮಾಡಿ. ಹಿಟ್ಟು ರೆಡಿಯಾದ ಬಳಿಕ ಉಂಡೆ ಕಟ್ಟಿ ಎಣ್ಣೆಯಲ್ಲಿ ಕರಿಯಬೇಕು. ಇದರ ನಡುವೆಯೇ ಒಂದು ಬೌಲ್ ನಲ್ಲಿ ಸ್ಪಲ್ಪ ಸಕ್ಕರೆ, ಏಲಕ್ಕಿ, ಕೇಸರಿ ಹಾಕಿ ಸಕ್ಕರೆ ಪಾಕ ರೆಡಿ ಮಾಡಿಕೊಳ್ಳಿ. ಕರಿದ ಉಂಡೆಗಳನ್ನು ಇದರಲ್ಲಿ ಅದ್ದಿ ಕೆಲವು ಸಮಯ ಇಟ್ಟರೆ ಜಾಮೂನು ರೆಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ