ಕಾಲಿನ ಪಾದಗಳ ಮೇಲಾಗಿರುವ ಕಲೆಯನ್ನು ಹೋಗಲಾಡಿಸಲು ಹೀಗೆ ಮಾಡಿ

ಭಾನುವಾರ, 18 ಫೆಬ್ರವರಿ 2018 (06:56 IST)
ಬೆಂಗಳೂರು : ಬೇಸಿಗೆಯಲ್ಲಿ ಅನೇಕ ಹುಡುಗಿಯರು ಮುಖ ಹಾಗೂ ತಮ್ಮ ಕೈಗಳ ಬಗ್ಗೆ ಕಾಳಜಿ ವಹಿಸ್ತಾರೆ ಮುಖ ಹಾಗೂ ಕೈಗಳಿಗೆ ಲೋಷನ್ ಹಚ್ಚಿಕೊಳ್ತಾರೆ. ಆದ್ರೆ ಕಾಲುಗಳನ್ನು ಮರೆತು ಬಿಡ್ತಾರೆ.


ಬಿಸಿಲಿನಲ್ಲಿ ತುಂಬಾ ಹೊತ್ತು ನಿಲ್ಲುವುದರಿಂದ ನಮ್ಮ ಕಾಲುಗಳು ಕೂಡ ಸೌಂದರ್ಯ ಕಳೆದುಕೊಳ್ಳತ್ತವೆ. ಬಿಸಿಲಿನಲ್ಲಿರುವ ಕಾಲುಗಳು ಒಂದು ಬಣ್ಣ ಹಾಗೂ ಚಪ್ಪಲಿಯಿಂದ ಮುಚ್ಚಿರುವ ಕಾಲುಗಳು ಒಂದು ಬಣ್ಣ ಪಡೆದಿರುತ್ತವೆ. ಚಪ್ಪಲಿ ತೆಗೆದಾಗ ಪಾದಗಳ ಮೇಲಾಗಿರುವ ಕಲೆ ಎದ್ದು ಕಾಣುತ್ತದೆ. ಇದನ್ನು ಹೋಗಲಾಡಿಸಲು ಹೀಗೆ ಮಾಡಿ.


ಮೊದಲು ನೀರಿಗೆ1 ಚಮಚ ಉಪ್ಪು ಹಾಗೂ2 ಚಮಚ ಶಾಂಪೂ ಹಾಕಿ. ಇದಾದ ನಂತ್ರ ನಿಮ್ಮ ಪಾದವನ್ನು ಈ ನೀರಿನಲ್ಲಿ 20 ನಿಮಿಷಗಳ ಕಾಲ ಇಟ್ಟುಕೊಳ್ಳಿ. ನಂತ್ರ ಕಾಲನ್ನು ಬೇರೆ ನೀರಿನಲ್ಲಿ ಕ್ಲೀನ್ ಮಾಡಿ. 2 ಚಮಚ ಟೋಮೋಟೋ ಹಣ್ಣಿನ ತಿರುಳು, 1 ಚಮಚ ಕಡಲೆ ಹಿಟ್ಟು ಹಾಗೂ 2 ಚಮಚ ರೋಸ್ ವಾಟರ್ ಮಿಕ್ಸ್ ಮಾಡಿ ಅದನ್ನು ಕಾಲಿಗೆ ಹಚ್ಚಿಕೊಳ್ಳಿ. ಕೆಲ ಸಮಯ ಬಿಟ್ಟು ಕಾಲನ್ನು ಸ್ವಚ್ಛ ಮಾಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ