ಮುಖದ ಅಂದ ಹೆಚ್ಚಿಸುವ ನ್ಯಾಚುರಲ್ ಫೇಸ್​ಪ್ಯಾಕ್

ಸೋಮವಾರ, 1 ನವೆಂಬರ್ 2021 (16:17 IST)
ಆರೋಗ್ಯಕರವಾಗಿಡಲು ನೈಸರ್ಗಿಕ ಮಾರ್ಗಗಳನ್ನು ಹುಡುಕುತ್ತಾರೆ. ಇಲ್ಲಿ ನಿಮಗೆ ಆಯುರ್ವೇದವು ಸಹಾಯ ಮಾಡುತ್ತದೆ.
ನಿಮ್ಮ ತ್ವಚೆಯ ಆರೈಕೆಗೆ ನೈಸರ್ಗಿಕ ವಿಧಾನಗಳನ್ನು ನೀವು ಹುಡುಕುತ್ತಿದ್ದರೆ, ನಾವು ಸುಲಭವಾಗಿ ತಯಾರಿಸಬಹುದಾದ ಫೇಸ್ ಪ್ಯಾಕ್ಗಳ ಪಟ್ಟಿ ಇಲ್ಲಿದೆ. 
ಜೇನು ಮತ್ತು ನಿಂಬೆ ಫೇಸ್ ಪ್ಯಾಕ್
ಜೇತುಪ್ಪವು ವಿಟಮಿನ್, ಖನಿಜ, ಅಮೈನೋ ಆಮ್ಲ, ಆ್ಯಂಟಿ ಆಕ್ಸಿಡೆಂಟ್ ಮತ್ತು ಕೆಲವು ಕಿಣ್ವಗಳನ್ನು ಹೊಂದಿರುತ್ತದೆ. ಇದು ಹೀಲಿಂಗ್ ಮತ್ತು ಕ್ಲೆನ್ಸಿಂಗ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ಜೇನುತುಪ್ಪದ ಈ ಗುಣಲಕ್ಷಣಗಳು ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿಡಲು ಮತ್ತು ಮೊಡವೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ನಿಂಬೆಯಲ್ಲಿ ವಿಟಮಿನ್ ಸಿ ಮತ್ತು ಸಿಟ್ರಿಕ್ ಆಮ್ಲವಿದೆ. ಅನೇಕ ತ್ವಚೆಯ ಸಮಸ್ಯೆಗಳಿಗೆ ನಿಂಬೆ ಉತ್ತಮ ಪರಿಣಾಮ ನೀಡುತ್ತದೆ.
 ಬೇವು, ತುಳಸಿ ಮತ್ತು ಅರಿಶಿನ ಫೇಸ್ ಪ್ಯಾಕ್
ಬೇವಿನ ಎಣ್ಣೆಯನ್ನು  ಹಚ್ಚುವುದರಿಂದ ಚರ್ಮದ ವಯಸ್ಸಾಗುವಿಕೆಯನ್ನು ಕಡಿಮೆ ಮಾಡಬಹುದು. ಅಧ್ಯಯನದ ಪ್ರಕಾರ, ತುಳಸಿಯು ಆಂಟಿಬ್ಯಾಕ್ಟೀರಿಯಲ್ ಮತ್ತು ಉರಿಯೂತದ ಪರಿಣಾಮಗಳನ್ನು ಹೊಂದಿದೆ ಅದು ಚರ್ಮದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
4 ತುಳಸಿ ಎಲೆಗಳು
3-4 ಬೇವಿನ ಎಲೆಗಳು
1 ಟೀಚಮಚ ಅರಿಶಿನ
1 ಟೀಚಮಚ ಮೊಸರು
ತುಳಸಿ ಮತ್ತು ಬೇವಿನ ಎಲೆಗಳ ಪೇಸ್ಟ್ ಮಾಡಿ. ಅದಕ್ಕೆ ಒಂದು ಚಿಟಿಕೆ ಅರಿಶಿನ ಮತ್ತು ಒಂದು ಚಮಚ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ನಿಮ್ಮ ಮುಖದ ಮೇಲೆ  ಸರಿಯಾಗಿ ಹಚ್ಚಿ. ಅದನ್ನು ಒಣಗಲು ಬಿಡಿ. ನಂತರ 30 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ತೊಳೆಯಿರಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ