ಸ್ಟ್ರೆಚ್ ಮಾರ್ಕ್ ನಿವಾರಣೆಗೆ ಇಲ್ಲಿದೆ ಸುಲಭ ವಿಧಾನ
ಬೆಂಗಳೂರು:ಹೆರಿಗೆಯ ಬಳಿಕ ಮಹಿಳೆಯರು ಹಲವಾರು ವ್ಯತಿರಿಕ್ತ ದೈಹಿಕ ಪರಿಣಾಮಗಳನ್ನು ಎದುರಿಸುತ್ತಾರೆ. ತೂಕ ಹೆಚ್ಚಳ, ಹೊಟ್ಟೆ, ತೂಳು, ತೊಡೆ ಭಾಗಗಳಲ್ಲಿ ಸ್ಟ್ರೆಚ್ ಮಾರ್ಕ್ ನಂತಹ ಸಮಸ್ಯೆಗಳನ್ನು ಬಹುತೇಕ ಎಲ್ಲಾ ಮಹಿಳೆಯರು ಸಾಮಾನ್ಯವಾಗಿ ಎದುರಿಸುವ ಸಮಸ್ಯೆ. ಸಮಸ್ಯೆ ಏನೋ ಸಾಮಾನ್ಯ ಎನ್ನಬಹುದು ಆದರೆ ಅದರಿಂದ ಮಹಿಳೆಯರಿಗಾಗುವ ಮುಜುಗರ ಹೇಳಲಾಗದು.
ಒಂದು ದೊಡ್ಡ ಸ್ಪೂನ್ ನಷ್ಟು ಹರಳೆಣ್ಣೆ ಹಾಗೂ ಎರಡು ಚಮಚ ಹರಳೆಣ್ಣೆಯನ್ನು ತೆಗೆದುಕೊಂಡು ಇವೆರಡನ್ನೂ ಮಿಶ್ರಣಗೊಳಿಸಿ ಸ್ಟ್ರೆಚ್ ಮಾರ್ಕ್ ಇರುವ ಜಾಗದಲ್ಲಿ ಲೇಪಿಸಿ. ಈ ಮಿಶ್ರಣವನ್ನು ಚರ್ಮದ ಮೇಲೆ ಹಚ್ಚಿದಾಗ ಆಲೂಗಡ್ಡೆಯಲ್ಲಿರುವ ಪಿಷ್ಟ ಚರ್ಮದಲ್ಲಿ ಕೊಲ್ಯಾಜೆನ್ ಎಂಬ ಕಣದ ಬೆಳವಣಿಗೆಗೆ ನೆರವಾಗುತ್ತದೆ. ಇದು ಚರ್ಮದಲ್ಲಿ ಸೆಳೆತವನ್ನು ಹೆಚ್ಚಿಸಿ ದೂರವಾಗಿದ್ದ ಚರ್ಮದ ಜೀವಕೋಶಗಳನ್ನು ಹತ್ತಿರ ತರುತ್ತದೆ.
* ತರಕಾರಿ ಎಣ್ಣೆಯ ಮಸಾಜ್:
ಹರಳೆಣ್ಣೆ, ತೆಂಗಿನೆಣ್ಣೆ ಮತ್ತು ಆಲಿವ್ ಎಣ್ಣೆಗಳಲ್ಲಿ ಮಾಯಿಶ್ಚರೈಸಿಂಗ್ ಮತ್ತು ನೆರಿಗೆಗಳನ್ನು ನಿವಾರಿಸುವ ಗುಣವಿದೆ. ಆದ್ದರಿಂದ ಪ್ರತಿನಿತ್ಯ ಮಲಗುವ ಮುನ್ನ ತರಕಾರಿ ಎಣ್ಣೆಯಿಂದ ಚರ್ಮದ ಕಲೆಗಳ ಮೇಲೆ ಮಸಾಜ್ ಮಾಡಿ. ಬೆಳಗ್ಗೆದ್ದು ಸಾಬೂನು ಮತ್ತು ಉಗುರು ಬೆಚ್ಚನೆಯ ನೀರಿನಿಂದ ತೊಳೆಯಿರಿ. ನೀವು ಹರಳೆಣ್ಣೆ ಬಳಸಿದ್ದರೆ ಹಚ್ಚಿದ ನಂತರ ಸ್ವಲ್ಪ ಆರಲು ಬಿಟ್ಟು, ನಂತರ ಉಗುರು ಬೆಚ್ಚನೆಯ ನೀರಿನಲ್ಲಿ ಅದ್ದಿದ ಬಟ್ಟೆಯಿಂದ ಕಲೆಗಳ ಭಾಗವನ್ನು ಸ್ವಲ್ಪ ಹೊತ್ತು ಸುತ್ತಿಡಿ.