ಡಾರ್ಕ್ ಸರ್ಕಲ್ ಹೋಗಲಾಡಿಸಲು ಸುಲಭ ಉಪಾಯ

Krishnaveni K

ಬುಧವಾರ, 31 ಜನವರಿ 2024 (10:30 IST)
Photo Courtesy: Twitter
ಬೆಂಗಳೂರು: ಒಂದು ವಯಸ್ಸು ದಾಟಿದ ಮೇಲೆ ಬಹುತೇಕರಿಗೆ ಕಾಡುವ ಸಮಸ್ಯೆಯೆಂದರೆ ಅದು ಡಾರ್ಕ್ ಸರ್ಕಲ್. ಇದನ್ನು ಹೋಗಲಾಡಿಸಲು ಸರಳ ಉಪಾಯವೊಂದನ್ನು ಮಾಡಿ ನೋಡಿ.

ಡಾರ್ಕ್ ಸರ್ಕಲ್ ಎಂದರೇನು?
ಕಣ್ಣಿನ ಕೆಳ ಭಾಗದಲ್ಲಿ ಸುತ್ತಲೂ ಕಪ್ಪಗಿನ ತೆಳುವಾದ ಪದರ ಕಾಣಿಸಿಕೊಳ್ಳುತ್ತದೆ. ಇದನ್ನು ಡಾರ್ಕ್ ಸರ್ಕಲ್ ಅಥವಾ ಕಪ್ಪು ವರ್ತುಲ ಎನ್ನುತ್ತೇವೆ. ಇದರಿಂದ ಮುಖದ ಸೌಂದರ್ಯವೂ ಹಾಳಾಗುತ್ತದೆ.

ಡಾರ್ಕ್ ಸರ್ಕಲ್ ಗೆ ಕಾರಣಗಳೇನು?
ಡಾರ್ಕ್ ಸರ್ಕಲ್ ಗೆ ಪ್ರಮುಖವಾದ ಕಾರಣವೆಂದರೆ ನಿದ್ರಾಹೀನತೆ. ಜೊತೆಗೆ ವಯಸ್ಸಾಗುವಿಕೆ, ಅಲರ್ಜಿಗಳು, ದೈಹಿಕ ಮತ್ತು ಮಾನಸಿಕ ಒತ್ತಡಗಳೂ ಡಾರ್ಕ್ ಸರ್ಕಲ್ ಗೆ ಕಾರಣವಾಗುತ್ತದೆ. ಅಲ್ಲದೆ ಕಣ್ಣಿಗೆ ಹೆಚ್ಚು ಒತ್ತಡ ನೀಡುವ ಕೆಲಸಗಳನ್ನು ಮಾಡುವುದೂ ಇದಕ್ಕೆ ಕಾರಣವಾಗುತ್ತದೆ.

ಡಾರ್ಕ್ ಸರ್ಕಲ್ ಗೆ ಪರಿಹಾರವೇನು?
ಮುಖಕ್ಕೆ ಏನೇನೋ ಪೇಸ್ಟ್ ಹಚ್ಚಿಕೊಳ್ಳುವ ಮೊದಲು ಮಾನಸಿಕವಾಗಿ ಶಾಂತಿಯಿಂದಿರುವುದನ್ನು ಅಭ್ಯಾಸ ಮಾಡಿಕೊಳ್ಳಿ. ದೇಹ ನಿರ್ಜಲೀಕರಣಕ್ಕೊಳಗಾಗದಂತೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಪ್ರತಿನಿತ್ಯ ಸಾಕಷ್ಟು ನಿದ್ರೆ ಮಾಡುವುದನ್ನು ಮರೆಯಬೇಡಿ. ಸೂರ್ಯನ ಬೆಳಕಿಗೆ ಮೈ ಒಡ್ಡುವಾಗ ಸನ್‍ ಸ್ಕ್ರೀನ್ ಲೋಷನ್ ಬಳಸಿ. ನಿಯಮಿತವಾಗಿ ಕೋಲ್ಡ್ ಕಂಪ್ರೆಸ್ ಬಳಸಿ, ಸೌತೆ ಕಾಯಿ ಚೂರುಗಳನ್ನು ಕಣ್ಣಿಗೆ ಇಟ್ಟುಕೊಳ್ಳುವುದು ಒಳ್ಳೆಯದು. ಕಪ್ಪು ವರ್ತುಲಗಳನ್ನು ತೆಗೆಯಲು ಲೇಸರ್ ಚಿಕಿತ್ಸೆಯನ್ನೂ ಮಾಡಲಾಗುತ್ತದೆ. ಆದರೆ ಇದನ್ನು ಮಾಡುವ ಮೊದಲು ತಜ್ಞರ ಸಲಹೆ ಪಡೆದು ಮುಂದುವರಿಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ