ಹೆಣ್ಣುಮಕ್ಕಳ ಸೌಂದರ್ಯದಲ್ಲಿ ಕೂದಲು ಬಹುಮುಖ್ಯ ಪಾತ್ರ ವಹಿಸುತ್ತದೆ. ಮುಖದ ಆರೈಕೆ ಮಾಡಿದಂತೆ ಕೂದಲ ಆರೈಕೆಯೂ ಅಷ್ಟೇ ಮುಖ್ಯ. ಇಲ್ಲದಿದ್ದರೆ ಕೂದಲು ಉದುರುವುದು, ತಲೆ ಹೊಟ್ಟು ಸಮಸ್ಯೆ ಇವೇ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೂದಲ ಆರೈಕೆಗೆ ಇಲ್ಲಿದೆ ಕೆಲ ಸಲಹೆಗಳು...
*ಕೂದಲಿಗೆ ಬಿಸಿನೀರಿನ ಸ್ನಾನ ಒಳ್ಳೆಯದಲ್ಲ, ಏಕೆ೦ದರೆ ಬಿಸಿನೀರು ನಿಮ್ಮ ಕೂದಲನ್ನು ಒಣಗಾಗಿಸುತ್ತದೆ.
* ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಬೀಸಿನೀರ ಸ್ನಾನದಿಂದ ಕೂದಲು ಒಣಗಿ ಸ್ಟಿಫ್ ಆಗಿ ಬೇಗನೇ ಉದುರಿ ಹೋಗುತ್ತದೆ.
* ಟೈಟ್ ಆಗಿ ಜಡೆ ಕಟ್ಟುತ್ತೀರಿ. ಆದರೆ ಹಾಗೆ ಮಾಡಿದರೆ ಕೂದಲಿನ ಫಾಲಿಕಲ್‌ನಲ್ಲಿ ಹೆಚ್ಚು ಒತ್ತಡ ಉ೦ಟಾಗಿ, ಹಾನಿಯಾಗುತ್ತದೆ.
* ಕೂದಲನ್ನು ನೇರವಾಗಿಸುವ ಐರನ್ ನಿಮ್ಮ ಕೂದಲಿನಲ್ಲಿರುವ ಪ್ರೊಟೀನ್‌ಗಳನ್ನು ಹಾಗೂ ಸ೦ರಕ್ಷಕ ಕ್ಯೂಟಿಕಲ್ಸ್‌ಗೆ ಹಾನಿ ಉಂಟು ಮಾಡುತ್ತದೆ.
* ಕ್ಯೂಟಿಕಲ್ಸ್ ಹಾನಿಗೊಳಗಾದರೆ, ಮಾಯಿಶ್ಚರ್ ಬ್ಯಾಲೆನ್ಸ್‌ಗೆ ತಡೆಯು೦ಟಾಗಿ ಕೂದಲು ಹೆಚ್ಚು ತು೦ಡಾಗುತ್ತದೆ. ಬಿಸಿ ಉಪಕರಣ ಉಪಯೋಗಿಸುವಾಗ ಕೂಲೆಸ್ಟ್ ಸೆಟಿ೦ಗ್‌ನಲ್ಲಿಡಲು ಪ್ರಯತ್ನಿಸಿ.
*ನಿಂಬೆ ರಸ ಹಾಗೂ ತೆಂಗಿನಕಾಯಿ ಹಾಲಿನ ಪೇಸ್ಟ್ ನೈಸರ್ಗಿಕವಾಗಿ ಕೂದಲನ್ನು ನಯಗೊಳಿಸಲು ಉತ್ತಮ ವಿಧಾನ. ಅದು ಕ್ರೀಮ್ ಕಂಡೀಷನರ್ ರೀತಿ ಕೆಲಸ ಮಾಡುತ್ತದೆ.
* ಒಂದು ಚಮಚ ಸೋಯಾಬಿನ್ ಎಣ್ಣೆ, 2 ಚಮಚ ಅರಳೆಣ್ಣೆಯನ್ನು ಬಿಸಿ ಮಾಡಿ. ತಣಿದ ಮೇಲೆ ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡಿ, 30 ನಿಮಿಷದ ಬಳಿಕ ಶ್ಯಾಂಪೂ ಹಾಕಿ ಕೂದಲು ತೊಳೆಯಿರಿ.
* 2 ಮೊಟ್ಟೆಯನ್ನು ಆಲಿವ್ ಎಣ್ಣೆ ಜೊತೆ ಬೆರೆಸಿ ತಲೆಗೆ ಮಸಾಜ್ ಮಾಡಿ.1 ಗಂಟೆ ಬಳಿಕ ತೊಳೆದುಕೊಳ್ಳಿ. ಕೂದಲು ಸಿಲ್ಕಿ ಅ್ಯಂಡ್ ಶೈನಿಯಾಗುತ್ತದೆ.
*ಚಹಾ ಮತ್ತು ಕಾಫಿ ಮಿಶ್ರಣದಿಂದ ಕೂದಲಿಗೆ ಕಂದು ಬಣ್ಣ ಬರುತ್ತದೆ. ಸ್ವಲ್ಪ ನೀರಿಗೆ ಚಹಾ ಪುಡಿ ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಇದನ್ನು ಸೋಸಿ ಅದು ಬಿಸಿಯಿರುವಾಗಲೇ ಕೂದಲಿಗೆ ಹಚ್ಚಿಕೊಳ್ಳಿ.
*ಕಾಫಿ ಪುಡಿಯನ್ನು ಕೂಡಾ ನೀರಿನಲ್ಲಿ ಕುದಿಸಿ ಕೂದಲಿಗೆ ಹಚ್ಚಿಕೊಳ್ಳಬಹುದು ಅಥವಾ ಕಾಫಿ ತರಿಯನ್ನು ಹೇರ್ ಕಂಡೀಷನಿಂಗ್‌ಗೆ ಬೆರೆಸಿ ಕೂದಲಿಗೆ ಹಚ್ಚಿಕೊಳ್ಳಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ