ಚಾಣಕ್ಯ ಮಾತುಗಳಲ್ಲಿ ಇವುಗಳ ಅರ್ಥವೇನು ಬಲ್ಲಿರಾ?

ಶನಿವಾರ, 4 ಮಾರ್ಚ್ 2017 (10:09 IST)
ವಿಷ ಎಂದರೇನು?
ನಮ್ಮ ಆವಶ್ಯಕತೆಗಿಂತ ಹೆಚ್ಚು ಏನೇ ಇದ್ದರೂ ವಿಷ. ಅಧಿಕಾರ, ಐಶ್ವರ್ಯ, ಹಸಿವು, ದುರಾಸೆ, ಸೋಮಾರಿತನ, ಪ್ರೇಮ, ಆಕಾಂಕ್ಷೆ, ಧ್ವೇಷ, ಯಾವುದೇ ಆದರೂ ಅಗತ್ಯಕ್ಕಿಂತ ಹೆಚ್ಚಿರಬಾರದು.


ಭಯ ಎಂದರೇನು?

ಅನಿಶ್ಚಿತತೆಯನ್ನು ಒಪ್ಪದಿರುವುದು. ಅದನ್ನು ಒಪ್ಪಿಕೊಂಡರೆ ಸಾಹಸ ಆಗುತ್ತದೆ.

ಅಸೂಯೆ ಎಂದರೇನು?
ಇನ್ನೊಬ್ಬರಲ್ಲಿನ ಒಳ್ಳೆಯತನ ಒಪ್ಪದಿರುವುದು. ಒಪ್ಪಿಕೊಂಡರೆ ಅದು ಪ್ರೇರಣೆ ಆಗುತ್ತದೆ.

ಕೋಪ ಎಂದರೇನು?
ನಮ್ಮ ನಿಯಂತ್ರಣದಾಚೆ ಇರುವ ವಿಷಯಗಳನ್ನು ಒಪ್ಪದೇ ಇರುವುದು. ಒಪ್ಪಿಕೊಂಡರೆ ಸಹಿಷ್ಣುತೆ ಆಗುತ್ತದೆ.

ಧ್ವೇಷ ಎಂದರೇನು?
ಒಬ್ಬ ಮನುಷ್ಯ ಇರುವಂತೆಯೇ ಅವನನ್ನು ಒಪ್ಪಿಕೊಳ್ಳದೇ ಇರುವುದು. ವಿರೋಧಿಸುವಿಕೆ ಒತ್ತಡ ತರುತ್ತದೆ. ಒಪ್ಪಿಕೊಂಡರೆ ಒತ್ತಡ ದೂರವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ