ರಕ್ಷಾ ಬಂಧನದ ರಾಖಿ ಕಟ್ಟುವಾಗ ಎಷ್ಟು ಗಂಟು ಹಾಕಬೇಕು
ರಕ್ಷಾ ಬಂಧನದ ದಿನ ಸಹೋದರರಿಗೆ ರಾಖಿ ಕಟ್ಟುವುದು ವಾಡಿಕೆ. ಸಹೋದರನಿಗೆ ಆರತಿ ಬೆಳಗಿ ಸಿಹಿ ತಿನಿಸಿ ಕೈಗೆ ರಾಖಿ ಕಟ್ಟಿ ಶುಭ ಹಾರೈಸುತ್ತೇವೆ. ಈ ರೀತಿ ರಾಖಿ ಕಟ್ಟುವಾಗಲೂ ಕೆಲವೊಂದು ನಿಯಮ ಅನುಸರಿಸಬೇಕಾಗುತ್ತದೆ.
ರಾಖಿ ಕಟ್ಟುವಾಗ ಒಟ್ಟು ಮೂರು ಗಂಟುಗಳನ್ನು ಹಾಕಬೇಕು. ಮೂರು ಎನ್ನುವ ಸಂಖ್ಯೆಗೆ ಹಿಂದೂ ಧಾರ್ಮಿಕ ನಂಬಿಕೆಯಲ್ಲಿ ವಿಶೇಷ ಮಹತ್ವವಿದೆ. ಮೂರು ಗಂಟುಗಳು ತ್ರಿಮೂರ್ತಿ ದೇವರಾದ ಬ್ರಹ್ಮ, ವಿಷ್ಣು, ಮಹೇಶ್ವರರ ಸಂಕೇತ. ಈ ದೇವರುಗಳ ಆಶೀರ್ವಾದ ಸಹೋದರನ ಮೇಲಿರಲಿ ಎಂದು ಹಾರೈಸುವ ಸಂಕೇತವಾಗಿದೆ. ಇದು ಸಹೋದರನ ಯಶಸ್ಸು, ಸಮೃದ್ಧಿ, ದೀರ್ಘಾಯುಷ್ಯದ ಸಂಕೇತವಾಗಿದೆ. ಈ ಕಾರಣಕ್ಕೆ ಮೂರು ಗಂಟು ಹಾಕಲೇ ಬೇಕು.