ಅಯ್ಯೋ ಕತ್ರಿನಾ... ಕಾಡ್ತಿದ್ದಾಳೆ ಇಲಿಯಾನ ....!

ಸೋಮವಾರ, 31 ಮಾರ್ಚ್ 2014 (10:30 IST)
PTI
ಇಲಿಯಾನ ಈಗ ಬಾಲಿವುಡ್ ಚಿತ್ರರಂಗದಲ್ಲಿ ಹೆಚ್ಚು ಹೆಚ್ಚು ಗಟ್ಟಿ ಆಗುತ್ತಿರುವ ನಟಿ. ದಕ್ಷಿಣ ಭಾರತದ ಈ ಚೆಲುವೆ ಈಗ ಬಾಲಿವುಡ್ ಸಿನಿಮಾ ಮಾತ್ರವಲ್ಲ ಅಲ್ಲಿನ ಕಲ್ಚರ್ ಗೂ ಸಹಿತ ತನ್ನನ್ನು ತಾನು ಹೊಂದಿಸಿಕೊಳ್ಳುತ್ತಿದ್ದಾಳೆ.

ಇತ್ತೀಚೆಗೆ ನಡೆದ ಮೀಟ್ ನಲ್ಲಿ ಆಕೆ ತನಗೆ ಬಾಲಿವುಡ್ ಚಾಕೊಲೆಟ್ ಹೀರೋ ರಣಬೀರ್ ಕಪೂರ್ ಜೊತೆಗೆ ಡೇಟಿಂಗ್ ಮಾಡಲಿಷ್ಟ ಎನ್ನುವ ಮಾತು ಹೇಳಿದಳಂತೆ. ಎಲ್ಲರಿಗೂ ಗೊತ್ತಿರುವಂತೆ ರಣಬೀರ್ ಮತ್ತು ಕತ್ರಿನಾ ಕೈಫ್ ಪ್ರೀತಿ ಕಳೆದ ಮೂರುವರ್ಷಗಳಿಂದ ನಡೆಯುತ್ತಿದೆ.

ಕತ್ರಿನ ಮತ್ತು ರಣಬೀರ್ ನಡುವೆ ಸಣ್ಣ ಮಟ್ಟದ ಗಲಾಟೆ ಇದ್ದರು ಅವರ ಪ್ರೀತಿಗೆನು ಕುಂದು ಬಂದಿಲ್ಲ ಎನ್ನುವ ಸುದ್ದಿಯು ಇದೆ, ಆದರೆ ಇಂತಹ ಸಮಯದಲ್ಲಿ ಇಲಿ ತನ್ನ ಮನದ ಮಾತು ಹೀಗೆ ಹೇಳಿದರೆ ಕಟ್ ಗೆ ಹೇಗೆ ಅನ್ನಿಸಿರಲ್ಲ.
PTI

ಇಷ್ಟೇ ಅಲ್ಲದೆ ಆಕೆಯನ್ನು ಪ್ರಶ್ನಿಸಿದ ರಿಪೋರ್ಟರ್ ರಣಬೀರ್ ಈಗಾಗಲೇ ಕತ್ರಿನ ಜೊತೆ ಇದ್ದಾರಲ್ಲ ಪ್ರೀತಿ ಮಾಡಿಕೊಂಡು ಎಂದಾಗ, ಆಕೆ ತೊಂದರೆ ಇಲ್ಲ, ಆಕೆ ಪಾಡಿಗೆ ಆಕೆ ಇರಲಿ, ನನ್ನ ಪಾಡಿಗೆ ನಾನು ರಣಬೀರ್ ಜೊತೆ ಡೇಟಿಂಗ್ ಮಾಡ್ತೀನಿ ಅಂದಿದ್ದಾಳಂತೆ.. ಅಯ್ಯೋ ಕತ್ರಿನಾ...

ವೆಬ್ದುನಿಯಾವನ್ನು ಓದಿ