ವಿದೇಶಕ್ಕೆ ಪ್ರಯಾಣಿಸಲು ದರ್ಶನ್‌ಗೆ ಕೋರ್ಟ್‌ ಗ್ರೀನ್ಸ್‌ ಸಿಗ್ನಲ್‌, ಯಾಕೆ ಗೊತ್ತಾ

Sampriya

ಮಂಗಳವಾರ, 8 ಜುಲೈ 2025 (18:43 IST)
ಡೆವಿಲ್ ಸಿನಿಮಾದ ಶೂಟಿಂಗ್‌ಗಾಗಿ ನಟ ದರ್ಶನ್ ಅವರು ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸದ್ದರು, ಇದೀಗ ಕೋರ್ಟ್‌ ‌ದರ್ಶನ್‌ಗೆ ಅನುಮತಿ ನೀಡಿದೆ. ಇದರಿಂದ ಶೀಘ್ರದಲ್ಲೇ ಡೆವಿಲ್ ಶೂಟಿಂಗ್‌ಗಾಗಿ ದರ್ಶನ್‌ ವಿದೇಶ ಪ್ರವಾಸ ಮಾಡಲಿದ್ದಾರೆ. 

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಷರತ್ತು ಬದ್ಧ ಜಾಮೀನು ನೀಡಿತ್ತು. ಆ ಬಳಿಕ ದರ್ಶನ್‌ ಡೆವಿಲ್ ಶೂಟಿಂಗ್‌ಗೆ ಅನುಮತಿ ಕೋರಿದ್ದರು. ಇದೀಗ ಸಿನಿಮಾದ ಶೂಟಿಂಗ್‌ ಸಲುವಾಗಿ ದರ್ಶನ್ ಅವರು ವಿದೇಶಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು.

ಈ ಹಿಂದೆ ಇಸ್ರೇಲ್‌ನಲ್ಲಿ ಚಿತ್ರೀಕರಣಕ್ಕೆ ತೀರ್ಮಾನಿಸಲಾಗಿತ್ತು. ಆದರೆ, ಇಸ್ರೇಲ್‌ನಲ್ಲಿ ಯುದ್ಧದ ವಾತಾವರಣ ‌ಹಿನ್ನೆಲೆ ಪ್ರಯಾಣ ಕೈಬಿಟ್ಟ ಚಿತ್ರತಂಡ ಥೈಲ್ಯಾಂಡ್‌ನಲ್ಲಿ ಮಾತ್ರ ಚಿತ್ರೀಕರಣ ಮಾಡಲು ನಿರ್ಧರಿಸಿದೆ. 

ಈ ಹಿಂದೆ ಕೋರ್ಟ್‌ನಲ್ಲಿ ಜು.1ರಿಂದ‌ ಜು.25ರ ವರೆಗೆ ಅವಕಾಶ ಪಡೆಯಲಾಗಿತ್ತು. ಆದರೆ, ಇಸ್ರೇಲ್‌ನಲ್ಲಿ ಯುದ್ಧ ನಡೆಯುತ್ತಿದ್ದು, ಆ ದೇಶದಲ್ಲಿ ಚಿತ್ರೀಕರಣ ಕೈಬಿಡಲಾಗಿದೆ. ಇದೀಗ ಜು.11 ರಿಂದ ಜು.30 ರವರೆಗೆ ಅವಕಾಶ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿತ್ತು. ದರ್ಶನ್ ಪರ ವಕೀಲ ಎಸ್.ಸುನಿಲ್ ಕುಮಾರ್ ವಾದ ಮಂಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ