ಉಗ್ರಂ ರೀಮೇಕ್ ನಲ್ಲಿ ಪ್ರಭಾಸ್ ನಟನೆ ?

ಸೋಮವಾರ, 31 ಮಾರ್ಚ್ 2014 (10:52 IST)
PR
ಟಾಲಿವುಡ್ ಪ್ರತಿಭಾವಂತ ನಟರಲ್ಲಿ ಪ್ರಭಾಸ್ ಸಹ ಒಬ್ಬರು. ಅವರು ಈಗ ಬಾಹುಬಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದಕ್ಕೆಂದು ತಮ್ಮ ಸಂಪೂರ್ಣ ಸಮಯ ಮೀಸಲಿಟ್ಟಿದ್ದಾರೆ. ಇದಕ್ಕೂ ಮುನ್ನ ಪ್ರಭಾಸ್ ಅವರು ವಿ.ವಿ. ವಿನಾಯಕ್ ಅವರ ನಿರ್ದೇಶನದ ಕನ್ನಡ ಹಿಟ್ ಚಿತ್ರವಾಗಿದ್ದ ಯೋಗಿ ರೀಮೇಕ್ ಚಿತ್ರದಲ್ಲಿ ನಟಿಸಿದ್ದರು.

ಆದರೆ ಅದು ಹೇಳಿಕೊಳ್ಳುವಂತಹ ಯಶಸ್ಸು ನೀಡಿರಲಿಲ್ಲ. ಈಗ ಮತ್ತೆ ಕನ್ನಡ ಚಿತ್ರದ ಕಡೆ ವಾಲಿದ್ದಾರೆ.ಶ್ರೀಮುರಳಿ, ಹರಿಪ್ರಿಯ ನಟಿಸಿರುವ ಪ್ರಶಾಂತ್ ನಿರ್ದೇಶನದ ಉಗ್ರಂ ಚಿತ್ರದ ರೀಮೇಕ್ ಚಿತ್ರದಲ್ಲಿ ನಟಿಸಲು ಸಿದ್ಧ ಆಗಿದ್ದಾರೆ.

PR
ಸದ್ಯಕ್ಕೆ ಬಾಹುಬಲಿ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಆಗಿರುವ ಇವರುಈ ಚಿತ್ರದ ಶೆಡ್ಯೂಲ್ ಪೂರ್ಣ ಆದ ಬಳಿಕ ಉಗ್ರಂ ತೆಲುಗು ಅವತರಣಿಕೆಯಲ್ಲಿ ನಟಿಸುವ ಸಾಧ್ಯತೆ ಹೆಚ್ಚಾಗಿ ಕೇಳಿ ಬರುತ್ತಿದೆ.

ಉಗ್ರಂ ಹಕ್ಕಿಗಾಗಿ ಜೂನಿಯರ್ ಎನ್ಟಿ ಆರ್ ಸಹ ಪ್ರಯತ್ನ ಪಟ್ಟಿದ್ದರು. ಅಂತಿಮವಾಗಿ ಪ್ರಭಾಸ್ ಕೈ ಸೇರಿದೆ. ಒಟ್ಟಾರೆ ಕನ್ನಡ ಚಿತ್ರರಸಿಕರನ್ನು ಸೆಳೆದ ಉಗ್ರಂ ಈಗ ತೆಲುಗು ಸಿನಿ ಪ್ರಿಯರನ್ನು ಎಷ್ಟರ ಮಟ್ಟಿಗೆ ಆಕರ್ಷಿ ಸುತ್ತದೆಯೋ.. ವೇಯ್ಟ್ ಅಂಡ್ ಸೀ...

ವೆಬ್ದುನಿಯಾವನ್ನು ಓದಿ