ಕರಣ್ ಜೋಹರ್ ಚಿತ್ರದಲ್ಲಿ ಶ್ರೀದೇವಿ ಪುತ್ರಿ ನಟನೆ?

ಶನಿವಾರ, 29 ಮಾರ್ಚ್ 2014 (09:57 IST)
PR
ಕೇವಲ ದಕ್ಷಿಣ ಭಾರತ ಮಾತ್ರವಲ್ಲ ಬಾಲಿವುಡ್ ಚಿತ್ರರಂಗ ಆಳಿದ ಮುದ್ದಾದ ನಟಿ ಶ್ರೀದೇವಿ. ಆಕೆಯ ಮಗಳು ಜಾನ್ಹವಿ ಈಗ ನಟನೆಗೆ ಸಿದ್ಧ ಆಗಿದ್ದಾಳೆ. ಜಾನ್ಹವಿಯನ್ನು ಚಿತ್ರರಂಗಕ್ಕೆ ಪರಿಚಯಿಸಲು ಅಮ್ಮ ಶ್ರೀದೇವಿ ಸಾಕಷ್ಟು ಉತ್ಸಾಹದಿಂದ ಇದ್ದಾಳೆ. ಅದಕ್ಕೆಂದು ಆಕೆ ಅನೇಕ ಸಿದ್ಧತೆ ಮಾಡುತ್ತಿದ್ದಾಳೆ.
ತನ್ನ ಮಗಳು ನಟಿಸಲು ಸ್ವಲ್ಪ ದಿನಗಳು ಬೇಕಾಗಿದೆ ಎಂದು ಹೇಳಿರುವ ಶ್ರೀದೇವಿ ಗಮನ ಬೇರೆಯ ಸಂಗತಿಗಳ ಕಡೆ ಇದೆ.

PR
ಆಕೆಯ ಮಗಳನ್ನು ಪರಿಚಯಿಸಲು ಅನೇಕ ನಿರ್ಮಾಪಕರು , ನಿರ್ದೇಶಕರುಗಳು ಬಂದರೂ ಸಹಿತ ಆಕೆ ಹೆಚ್ಚಿನ ಆದ್ಯತೆ ನೀಡಿಲ್ಲ. ಆದರೆ ಸದ್ಯದ ಸುದ್ದಿ ಪ್ರಕಾರ ಜಾನ್ಹವಿಯು ಕರಣ್ ಜೋಹರ್ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ.. ಅದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಸದ್ಯಕ್ಕೆ ಗೊತ್ತಿಲ್ಲ,.. ನಮಗೆ ತಿಳಿದ ತಕ್ಷಣ ....!

ವೆಬ್ದುನಿಯಾವನ್ನು ಓದಿ