ಕರೋಡ್‌ಪತಿ ಏಳನೇ ಸೀಸನ್ಗೆ ಏಳು ಕೋಟಿ

ಸೋಮವಾರ, 31 ಮಾರ್ಚ್ 2014 (15:41 IST)
ಮುಂಬೈ: ಕನ್ನಡದ ಕೋಟ್ಯಾಧಿಪತಿ ಎರಡು ಸೀಸನ್ಗಳನ್ನು ಮುಗಿಸಿದ ಸಂಗತಿ ನಿಮಗೆಲ್ಲಾ ಗೊತ್ತೇ ಇದೆ. ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರೆ ಒಂದು ಕೋಟಿ ರೂಪಾಯಿ ಗೆಲ್ಲುವ ಅವಕಾಶ ಇತ್ತು. ಅದರೊಂದಿಗೆ ನಾಲ್ಕು ಲೈಫ್ಲೈನ್ಗಳನ್ನು ನೀಡಲಾಗಿತ್ತು. ಇದೀಗ ಹಿಂದಿಯಲ್ಲಿ ಕೌನ್ ಬನೇಗಾ ಕರೋಡ್ ಪತಿ ಏಳನೇ ಸೀಸನ್ ಇದೇ ಸೆ.6ರಿಂದ ಆರಂಭಗೊಳ್ಳಲಿದೆ. ಈ ಬಾರಿಯ ವಿಶೇಷ ಎಂದರೆ ಬಹುಮಾನದ ಮೊತ್ತವನ್ನು ರೂ.7ಕೋಟಿಗೆ ಏರಿಸಲಾಗಿದೆ. ಹಾಗೆಯೇ ನಾಲ್ಕು ಲೈಫ್ಲೈನ್ಗಳ ಬದಲಾಗಿ ಐದನ್ನು ಬಳಸಿಕೊಳ್ಳುವ ಅವಕಾಶ ನೀಡಲಾಗಿದೆ. ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ನಲ್ಲಿ ಸೆ.6ರಿಂದ ಈ ಸೀಸನ್ ಆರಂಭವಾಗಲಿದೆ.

ಆರನೇ ಸೀಸನ್ನಲ್ಲಿ ಸ್ಪರ್ದೆಗೆ ಜಾಕ್ಪಾಟ್ ಪ್ರಶ್ನೆ ಕೇಳಲಾಗುತ್ತಿತ್ತು. ಈ ಪ್ರಶ್ನೆಗೆ ಸರಿ ಉತ್ತರ ಕೊಟ್ಟರೆ 5ಕೋಟಿ ರೂಪಾಯಿ ಬಹುಮಾನ ಸಿಗುತ್ತಿತ್ತು. ಈಗ ಜಾಕ್ಪಾಟ್ ಮೊತ್ತವನ್ನು ಏಳುಕೋಟಿಗೆ ಏರಿಸಲಾಗಿದೆ ಎನ್ನುತ್ತವೆ ಮೂಲಗಳು. ಇದರೊಂದಿಗೆ ಹೆಚ್ಚುವರಿ ಲೈಫ್ಲೈನ್ ಸಹ ಇರುತ್ತದೆ ಎಂಬ ವಿವರಗಳು ಇನ್ನಷ್ಟೇ ಹೊರಬೀಳಬೇಕು. ಈವರೆಗೆ ಅಮಿತಾಬ್ ನಡೆಸುತ್ತಿದ್ದ ಈ ಶೋ ಮುಂಬೈ ಗುರಗಾಂವ್ ಫಿಲಂಸಿಟಿಯಲ್ಲಿ ನಡೆಯುತ್ತಿತ್ತು. ಆದರೆ ಈ ಸೀಸನ್ ಚಿತ್ರೀಕರಣ ಮುಂಬೈನ ಅಂಧೇರಿ ಪಶ್ಚಿಮ ಭಾಗದ ಯಶ್ರಾಜ್ ಫಿಲಂಸ್ ಸ್ಟುಡಿಯೋದಲ್ಲಿ ನಡೆಯಲಿದೆ. ಇದಕ್ಕಾಗಿ ಭರ್ಜರಿ ಸೆಟ್ ಕೂಡಾ ಹಾಕಲಾಗಿದೆಯಂತೆ. ಎಪ್ಪತ್ತರ ಗಡಿ ತಲುಪಿರುವ ಅಮಿತಾಬ್ ಈ ಚಿತ್ರದಲ್ಲಿ ಯಾವ ಮೋಡಿ ಮಾಡಲಿದ್ದಾರೆ ಎಂದು ಕಾದುನೋಡಬೇಕಷ್ಟೇ.

ವೆಬ್ದುನಿಯಾವನ್ನು ಓದಿ