ತೆಲುಗು ಸಿನೆಮಾದ ಖ್ಯಾತ ನಟ ಅಕ್ಕಿನೇನಿ ನಾಗೇಶ್ವರರಾವ್ ವಿಧಿವಿಶ

ಬುಧವಾರ, 22 ಜನವರಿ 2014 (10:30 IST)
PR
PR
ಹೈದರಾಬಾದ್: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಮತ್ತು ತೆಲುಗು ಸಿನೆಮಾದ ಖ್ಯಾತನಾಮರಾದ, ಪ್ರಸಿದ್ಧ ನಟ ಮತ್ತು ನಿರ್ಮಾಪಕ ಅಕ್ಕಿನೇನಿ ನಾಗೇಶ್ವರ ರಾವ್ ಹೈದರಾಬಾದ್‌ನಲ್ಲಿ ಮುಂಜಾನೆ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ಅನೇಕ ವರ್ಷಗಳ ಕಾಲ ಕರುಳಿನ ಕ್ಯಾನ್ಸರ್ ಕಾಯಿಲೆಯ ಜತೆ ಹೋರಾಡಿದ ರಾವ್ ಚಿತ್ರರಂಗದಲ್ಲಿ 75 ವರ್ಷಗಳ ಕಾಲ ತೊಡಗಿಸಿಕೊಂಡಿದ್ದರು. 240 ತೆಲುಗು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಅನೇಕ ತಮಿಳು ಚಿತ್ರಗಳಲ್ಲಿ ಕೂಡ ಕೆಲಸ ಮಾಡಿದ್ದಾರೆ.ಅವರಿಗೆ 2011ರಲ್ಲಿ ಅತ್ಯಂತ ಉನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣವನ್ನು ನೀಡಿ ಗೌರವಿಸಲಾಯಿತು. ಅವರಿಗೆ ಪದ್ಮಶ್ರೀ ಕೂಡ ನೀಡಲಾಗಿದೆ. ಟಾಲಿವುಡ್ ಚಿತ್ರರಂಗದಲ್ಲಿ ಅವರು ಎಎನ್‌ಆರ್ ಎಂದೇ ಖ್ಯಾತಿ ಪಡೆದಿದ್ದರು.

ತೆಲುಗು ಚಿತ್ರೋದ್ಯಮವನ್ನು ಮದ್ರಾಸ್‌ನಿಂದ ಹೈದರಾಬಾದ್‌ಗೆ ಸ್ಥಳಾಂತರಿಸಿದ ಆದ್ಯಪ್ರವರ್ತಕರು ಎಂಬ ಹೆಸರು ಪಡೆದಿದ್ದರು. ಅವರು ಅನ್ನಪೂರ್ಣ ಸ್ಟುಡಿಯೋಸ್ ಸ್ಥಾಪಿಸಿದರು ಮತ್ತು ಅವರ ಪುತ್ರ ನಾಗಾರ್ಜುನ, ಸೊಸೆ ಅಮಾಲಾ ಮತ್ತು ಅನೇಕ ಮೊಮ್ಮಕ್ಕಳು ಅವರ ಹೆಜ್ಜೆಗುರುತುಗಳನ್ನು ಅನುಸರಿಸಿ ನಟರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ