ನನ್ನ ಮಕ್ಕಳ ಬಾಲ್ಯ ನಾನು ನೋಡಲೇ ಇಲ್ಲ - ಅಮಿತಾಬ್ ಬಚ್ಚನ್

ಮಂಗಳವಾರ, 25 ಮಾರ್ಚ್ 2014 (10:31 IST)
PR
ಬದುಕಲ್ಲಿ ಕೆಲವು ಬೇಸರ ನೋವುಗಳು ಪ್ರತಿಯೊಬ್ಬರಲ್ಲೂ ಶಾಶ್ವತವಾಗಿ ಉಳಿದಿರುತ್ತದೆ. ಅಂತಹ ನೋವು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಲ್ಲೂ ಸಹಿತ ಶಾಶ್ವತವಾಗಿ ನೆಲೆ ಊರಿದೆ. ಅದರ ಬಗ್ಗೆ ಹೇಳಿದ್ದು ಹೀಗೆ..

ಸಾಮಾನ್ಯವಾಗಿ ಪ್ರತಿಯೊಬ್ಬ ತಾಯಿತಂದೆಗೂ ಸಹಿತ ತಮ್ಮ ಮಕ್ಕಳು ಬೆಳವಣಿಗೆಯನ್ನು ನೋಡುವುದು, ಅವರ ಈ ಪ್ರಕ್ರಿಯೆಯನ್ನು ಆನಂದದಿಂದ ಸವಿಯುವುದು ವಿಶಿಷ್ಟವಾದ ಅನುಭೂತಿ. ಆದರೆ ಕೆಲಸದ ಒತ್ತಡದಿಂದ ನನಗೆ ಅಂತಹ ಯಾವುದೇ ಸಂತೋಷವನ್ನು ಸಹಿತ ಹೊಂದಲು ಆಗಲೇ ಇಲ್ಲ.

PR
ಶ್ವೇತ ಮತ್ತು ಅಭಿಷೇಕ್ ಬಾಲ್ಯ ಯಾವ ರೀತಿ ಇತ್ತು, ಅವರು ಹೇಗೆ ಬೆಳೆದರು ಎನ್ನುವುದರ ಬಗ್ಗೆ ನನಗೆ ಅರಿವೇ ಇಲ್ಲ. ನಾನು ಮನೆಗೆ ಬಂದಾಗ ಅವರು ಮಲಗಿ ನಿದ್ರಿಸುತ್ತಿದ್ದರು. ಅವರು ಎದ್ದಾಗ ನಾನು ಹೊರಟಿರುತ್ತಿದ್ದೆ , ಇಲ್ಲವೇ ಅವರು ಶಾಲೆಗೆ ಹೋಗುವ ಸಮಯದಲ್ಲಿ ನಾ ಇನ್ನು ಎದ್ದೆ ಇರುತ್ತಿರಲಿಲ್ಲ. ನಾನು ಸಿಕ್ಕಾಪಟ್ಟೆ ಬ್ಯುಸಿಯಾಗಿ ಇರುತ್ತಿದೆ.

ನಾನು ಸ್ವಲ್ಪ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಂಡ ಬಳಿಕವು ಸಹಿತ ಮಕ್ಕಳ ಜೊತೆ ಸಮಯ ಕಳೆಯಲು ಅವಕಾಶ ಸಿಗಲೇ ಇಲ್ಲ. ಏಕೆಂದರೆ ಅವರಿಬ್ಬರೂ ಹಾಸ್ಟಲ್ ನಲ್ಲಿ ಇದ್ದರು. ಈಗ ನಾನು ಇಷ್ಟೊಂದು ಹಣ, ಖ್ಯಾತಿ ಏನೇ ಗಳಿಸಿದ್ದರು ಸಹಿತ ನನ್ನ ಮಕ್ಕಳ ಬಾಲ್ಯ, ಬೆಳವಣಿಗೆ ನೋಡಲು ಆಗಲೇ ಇಲ್ಲ ಎನ್ನುವ ನೋವು ನನ್ನ ಮನವನ್ನು ಬಾಧಿಸುತ್ತಲೇ ಇದೆ ಎಂದು ಮನದ ಮಾತನ್ನು ಬಿಚ್ಚಿ ಹೇಳಿದ್ದಾರೆ ಬಿಗ್ ಬಿ !

ವೆಬ್ದುನಿಯಾವನ್ನು ಓದಿ