666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದ ಶಿವಣ್ಣನ ಲುಕ್‌ಗೆ ಎಲ್ಲರೂ ಫಿದಾ

Sampriya

ಬುಧವಾರ, 9 ಜುಲೈ 2025 (15:51 IST)
Photo Credit X
666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದಲ್ಲಿ ನಟ ಡಾಲಿ ಧನಂಜಯ್ ಅವರ ಫಸ್ಟ್ ಲುಕ್ ರಿಲೀಸ್ ಮಾಡಿದ್ದ ಚಿತ್ರತಂಡ ಇದೀಗ ನಟ ಶಿವರಾಜ್‌ಕುಮಾರ್ ಅವರ ಫಸ್ಟ್‌ಲುಕ್ ಬಿಡುಗಡೆ ಮಾಡಿದೆ. 

ಇದೀಗ ಶಿವಣ್ಣನ ಲುಕ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಸೂಟ್ ಧರಿಸಿ, ಕೈಯಲ್ಲಿ ವಿಂಟೇಜ್ ರಿವಾಲ್ವರ್ ಹಿಡಿದು ಹಿಡಿದು ತೀಕ್ಷ ನೋಟದೊಂದಿಗೆ ಹೆಜ್ಜೆ ಹಾಕುತ್ತಾ ಸ್ಟೈಲೀಶ್ ಆಗಿರುವ ಪಾತ್ರವನ್ನು ತಂಡ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬಿಡುಗಡೆ ಮಾಡಿದೆ. 
ಶಿವಣ್ಣ ಲುಕ್ ನೋಡ್ತಿದ್ರೆ ಡಾ.ರಾಜ್ ಕುಮಾರ್ ಅವರ 999 ರ ಬ್ಲಾಕ್ಬಸ್ಟರ್ ಸ್ಪೈ ಚಿತ್ರದ ರೀತಿಯಿದೆ. ಒಟ್ಟಾರೆ ಶಿವಣ್ಣನ ಗೆಟಪ್ ಭಾರೀ ಕುತೂಹಲವನ್ನು ಮೂಡಿಸುತ್ತಿದೆ. 


ಶಿವಣ್ಣ ಪ್ರತಿ ಸಿನಿಮಾದಲ್ಲಿಯೂ, ಪ್ರತಿ ಪಾತ್ರದಲ್ಲಿಯೂ ಹೊಸತನ ನೀಡುತ್ತಾರೆ. ಅಂತೆಯೇ 666 ಆಪರೇಷನ್ ಡ್ರೀಮ್ ಥಿಯೇಟರ್‌ನಲ್ಲಿ ಅವರ ಪಾತ್ರ ಪ್ರೇಕ್ಷಕರಿಗೆ ಎಂದು ಮರೆಯಲಾಗದ ಅನುಭವ ನೀಡಲಿದೆ. ರೆಟ್ರೋ ಕಥೆಯನ್ನು ಹೊಂದಿರುವ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾಗೆ ಹೇಮಂತ್ ಎಂ ರಾವ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. 

ಡಾ. ವೈಶಾಕ್ ಜೆ ಗೌಡ ಅವರ ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾಗೆ ಚರಣ್ ರಾಜ್ ಸಂಗೀತ, ಅದ್ವೈತ ಗುರುಮೂರ್ತಿ ಹಾಗೂ ವಿಶ್ವಾಸ್ ಕಶ್ಯಪ್ ನಿರ್ಮಾಣ ವಿನ್ಯಾಸ , ಇಂಚರಾ ಸುರೇಶ್ ಕಾಸ್ಟೈಮ್ ಡಿಸೈನ್ ಚಿತ್ರಕ್ಕಿದೆ. ಸದ್ಯ ಶಿವಣ್ಣ ಹಾಗೂ ಧನಂಜಯ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿ ಸಿನಿಮಾಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿಸಿರುವ ಚಿತ್ರತಂಡ, ಮುಂದಿನ ದಿನಗಳಲ್ಲಿ ಮತ್ತಷ್ಟು ತಾರಾಬಳಗದ ಬಗ್ಗೆ ಮಾಹಿತಿ ಕೊಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ