ಬಾಲಿವುಡ್ ಗ್ಲಾಮರ್ ನಟಿ ಕರೀನ ಕಪೂರ್ ಗೆ ಇತ್ತೀಚಿಗೆ ತನ್ನ ಅಕ್ಕ ಕರಿಷ್ಮಾ ಳ ಬಗ್ಗೆ ಎಷ್ಟು ಹೇಳಿದರೂ ಸಾಕಾಗ್ತಾ ಇಲ್ಲ. ಆಕೆ ಪ್ರಕಾರ ಕರಿಷ್ಮಾ ಕಪೂರ್ ಅತ್ಯಂತ ಸುಂದರಿಯಂತೆ. ಆಕೆಯ ಸಮಕಾಲಿನ ನಟಿಯರಿಗಿಂತ ಕರಿಷ್ಮಾ ಸಿಕ್ಕಾಪಟ್ಟೆ ಸುಂದರಿಯಂತೆ! ಹಾಗಂತ ಹೇಳಿದ್ದಾಳೆ .
ನನ್ನ ಅಕ್ಕನಿಗೆ ಎರಡು ಮಕ್ಕಳಿದ್ದಾರೆ. ಆದರೆ ಆಕೆ ಎರಡು ಮಕ್ಕಳ ತಾಯಿ ಎಂದು ಅನ್ನಿಸುವುದೇ ಇಲ್ಲ. ಆಕೆ ಅತ್ಯಂತ ಸುಂದರಿ.
PR
ನನ್ನ ಅಕ್ಕನ ಹೃದಯ ಚಿನ್ನದಂತದ್ದು ಎನ್ನುವುದನ್ನು ಸಹ ಹೇಳಿದ್ದಾಳೆ. ಕರಿಷ್ಮಳಿಗೆ ಇಂತಹ ರೂಪ ಇರುವುದು ಆಕೆಯ ಅದೃಷ್ಟ ಎಂದು ಅಕ್ಕನ ಲಕ್ಕನ್ನು ಕೊಂಡಾಡಿದ್ದಾಳೆ ಈ ಚೆಲುವೆ. ಈಕೆ ನನ್ನ ತಾಯಿಯಿಂದ ಸೌಂದರ್ಯ ಬಳುವಳಿಯಾಗಿ ಪಡೆದಿದ್ದಾಳೆ ಎಂದು ಸಿಕ್ಕಾಪಟ್ಟೆ ಹೊಗಳಿದ್ದಾಳೆ ಬೇಬೊ.
ಆದರೂ ಸಹ ತಂಗಿ ತಾನೇ ಅಕ್ಕನನ್ನು ಹೊಗಳಿರುವುದು ಎಂದು ಬಾಲಿವುಡ್ ಇತರ ಸುಂದರಿಯರು ಕುಹಕ ಆಡ್ತಾ ಇದ್ದಾರಂತೆ.. ಹೆತ್ತವರಿಗೆ ....! ಅಂತಾ ಇದ್ದಾರಪ್ಪ ಬಾಲಿವುಡ್ ಮಂದಿ !