ರಜನಿಕಾಂತ್ ಹೊಸ ಚಿತ್ರಕ್ಕೆ ಅನುಷ್ಕ ಶೆಟ್ಟಿ ಆಯ್ಕೆ ?

ಬುಧವಾರ, 26 ಮಾರ್ಚ್ 2014 (09:33 IST)
PR
ದಕ್ಷಿಣ ಭಾರತ ಸೂಪರ್ ಸ್ಟಾರ್ ರಜನಿಕಾಂತ್ ಅವರ ಚಿತ್ರದಲ್ಲಿ ಮಾದಕ ನಟಿ ಅನುಷ್ಕ ಶೆಟ್ಟಿ ನಟಿಸುತ್ತಿದ್ದಾರೆ. ರಜನಿ ಅವರ ಹೊಸ ಚಿತ್ರವನ್ನು ಕೆ.ಎಸ್. ರವಿ ಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ.ರವಿಕುಮಾರ್ ಅವರ ನಿರ್ದೇಶನದಲ್ಲಿ ರಜನಿ ರಾಣ, ಜಗ್ಗು ಬಾಯ್ ಚಿತ್ರಗಳಲ್ಲಿ ನಟಿಸ ಬೇಕಿತ್ತು. ಆದರೆ ಅದು ಸಾಧ್ಯ ಆಗಿರಲಿಲ್ಲ. ಆದರೆ ಕೊಚ್ಚದಿಯನ್ ನಲ್ಲಿ ಇಬ್ಬರು ಕೆಲಸ ಮಾಡಿದ್ದಾರೆ. ಇತ್ತೀಚೆಗೆ ರಜನಿಕಾಂತ್ ರವಿಕುಮಾರ್ ಅವರ ಬಳಿ ಪಡಿಯಪ್ಪ ಕಥೆಯಂತೆ ಇರುವ ಚಿತ್ರವನ್ನು ನಿರ್ಮಿಸ ಬೇಕು ಎನ್ನುವ ಆಶಯ ವ್ಯಕ್ತ ಪಡಿಸಿದರಂತೆ. ಆಗ ಅವರು ಅದಕ್ಕೆ ಸಿದ್ಧ ಆದರಂತೆ. ಪೂರಕವಾಗಿ ಆ ಚಿತ್ರದ ಹೀರೋಯಿನ್ ಆಗಿ ಅನುಷ್ಕ ಆಯ್ಕೆ ಆಗಿದ್ದಾರೆ.

PR
ರಜನಿ ಚಿತ್ರ ಎಂದೊಡನೆ ಆಕೆ ಸಿಕ್ಕಾಪಟ್ಟೆ ಖುಷಿಯಿಂದ ಒಪ್ಪಿದ್ದಾರೆ. ಮುಖ್ಯವಾಗಿ ಆಕೆ ಈಗ ಬಾಹುಬಲಿ ಮತ್ತು ರುದ್ರಮ ದೇವಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗ ಈ ಹೊಸ ಚಿತ್ರಕ್ಕೆ ಸಮಯ ನೀಡಲು ಸಂಪೂರ್ಣವಾಗಿ ಸಿದ್ಧ ಆಗಿದ್ದಾರೆ ಅನುಷ್ಕ. ಈ ಚಿತ್ರದ ಟೈಟಲ್ ಬಗ್ಗೆ ರಜನಿ ಮತ್ತು ರವಿ ನಡುವೆ ಚರ್ಚೆಗಳು ಸಾಗುತ್ತಿವೆ. ಒಟ್ಟಾರೆ ರಜನಿ ಜೊತೆಯಲ್ಲಿ ಅನುಷ್ಕ ಗೆ ನಟಿಸುವ ಸುಯೋಗ!

ವೆಬ್ದುನಿಯಾವನ್ನು ಓದಿ