2025 ರ ಅತ್ಯಂತ ಜನಪ್ರಿಯ ಮತ್ತು ನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿ ಪ್ರಕಟಿಸಿದ ಐಎಂಡಿಬಿ

Krishnaveni K

ಬುಧವಾರ, 9 ಜುಲೈ 2025 (14:41 IST)
ಮುಂಬೈ:  ಸಿನಿಮಾಗಳು, ಟಿವಿ ಶೋಗಳು ಮತ್ತು ಸೆಲೆಬ್ರಿಟಿಗಳ ಬಗ್ಗೆ ಮಾಹಿತಿಯ ಅಧಿಕೃತ ಮೂಲ ಹಾಗೂ ವಿಶ್ವದ ಅತ್ಯಂತ ಜನಪ್ರಿಯ ತಾಣ ಐಎಂಡಿಬಿ www.imdb.com 2025 ರಲ್ಲಿ ಅತ್ಯಂತ ಜನಪ್ರಿಯ ಭಾರತೀಯ ಸಿನಿಮಾಗಳು ಮತ್ತು 2025 ರ ಜುಲೈನಿಂದ ಡಿಸೆಂಬರ್‌ವರೆಗೆ ಬಿಡುಗಡೆಯಾಗಲಿರುವ ಅತ್ಯಂತ ನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ.

ಐಎಂಡಿಬಿಗೆ ಪ್ರತಿ ತಿಂಗಳು ಭೇಟಿ ನೀಡುವ 250 ಮಿಲಿನ್‌ಗೂ ಹೆಚ್ಚು ವೀಕ್ಷಕರು ನಡೆಸಿದ ಪುಟ ವೀಕ್ಷಣೆಯನ್ನು ಆಧರಿಸಿ ಈ ಪಟ್ಟಿ ರೂಪಿಸಲಾಗಿದ್ದು, ಏನನ್ನು ವೀಕ್ಷಿಸಬೇಕು ಎಂದು ನಿರ್ಧಾರ ಮಾಡಲು ಮತ್ತು ಅನ್ವೇಷಣೆ ನಡೆಸಲು ವೀಕ್ಷಕರು ಐಎಂಡಿಬಿ ವೆಬ್‌ಸೈಟ್‌ಗೆ ಭೇಟಿ ನೀಡಿರುತ್ತಾರೆ.
 
"2025 ರಲ್ಲಿ ಈವರೆಗೆ ಭಾರತದ ಜನಪ್ರಿಯ ಸಿನಿಮಾಗಳ ಪಟ್ಟಿಯಲ್ಲಿ ಛಾವಾ ಸ್ಥಾನ ಪಡೆದಿದ್ದು ನಮಗೆ ಸಂತೋಷ ತಂದಿದೆ" ಎಂದು ಛಾವಾ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಹೇಳಿದ್ದಾರೆ. "ಇದು ಅಭಿಮಾನಗಳ ನೇರ ಅಭಿಪ್ರಾಯವಾಗಿದೆ ಎಂಬುದು ಈ ಪಟ್ಟಿಯನ್ನು ಇನ್ನೂ ವಿಶೇಷವಾಗಿಸಿದೆ. ಅವರ ಅಪಾರ ಪ್ರೀತಿ ಮತ್ತು ಧನಾತ್ಮಕವಾಗಿ ಈ ಸಿನಿಮಾವನ್ನು ಅವರು ಸ್ವೀಕರಿಸಿರುವುದು ಅತ್ಯಂತ ಖುಷಿಯ ಸಂಗತಿಯಾಗಿದೆ. ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಮತ್ತು ಅಕ್ಷಯ್ ಖನ್ನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ವಿಶ್ವದ ವೀಕ್ಷಕರಿಗೆ ಹತ್ತಿರುವಾಗುವ ಕಥೆಗಳನ್ನು ಹೇಳುವುದನ್ನು ಮುಂದುವರಿಸಲು ಇಡೀ ಪಾತ್ರವರ್ಗ ಮತ್ತು ತಂಡಕ್ಕೆ ಸ್ಪೂರ್ತಿ ನೀಡುತ್ತದೆ" ಎಂದು ನಿರ್ದೇಶಕರು ಹೇಳಿದ್ದಾರೆ.
 
"ಐಎಂಡಿಬಿಯ ಈ ಮನ್ನಣೆಯು ಇಡೀ ವಿಶ್ವದಲ್ಲಿ ನಮ್ಮ ಅಭಿಮಾನಿಗಳು ಎಷ್ಟು ಉತ್ಸಾಹಿತರಾಗಿದ್ದಾರೆ ಎಂಬುದನ್ನು ಸೂಚಿಸುತ್ತದೆ" ಎಂದು ಕೂಲಿ ಸಿನಿಮಾದ ನಿರ್ದೇಶಕ ಲೋಕೇಶ್‌ ಕನಕರಾಜ್ ಹೇಳಿದ್ದಾರೆ. ರಜನೀಕಾಂತ್ ಮತ್ತು ಸತ್ಯರಾಜ್ ಅವರು 38 ವರ್ಷಗಳ ನಂತರ ಒಟ್ಟಿಗೆ ಸೇರಿದ್ದು, ತೆರೆಯ ಮೇಲೆ ಅದ್ಭುತವನ್ನು ಸೃಷ್ಟಿಸಲಿದ್ದಾರೆ ಮತ್ತು ನಮ್ಮ ಈ ಕೃತಿಯು ಪ್ರೇಕ್ಷಕರ ಮನರಂಜಿಸಲಿದೆ ಮತ್ತು ಅವರ ನಿರೀಕ್ಷೆಯನ್ನು ಪೂರೈಸುತ್ತದೆ ಎಂಬ ಆಶಾಭಾವವನ್ನು ನಾವು ಹೊಂದಿದ್ದೇವೆ" ಎಂದು ನಿರ್ದೇಶಕರು ಹೇಳಿದ್ದಾರೆ.
 
2025 ರಲ್ಲಿ ಈವರೆಗಿನ ಅತ್ಯಂತ ಜನಪ್ರಿಯ ಸಿನಿಮಾಗಳು
ಛಾವಾ
ಡ್ರ್ಯಾಗನ್
ದೇವಾ
ರೇಡ್ 2
ರೆಟ್ರೋ
ದಿ ಡಿಪ್ಲೊಮ್ಯಾಟ್
L2: ಎಂಪುರಾನ್
ಸಿತಾರೆ ಜಮೀನ್ ಪರ್
ಕೇಸರಿ ಚಾಪ್ಟರ್ 2: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಜಲಿಯನ್‌ವಾಲಾ ಬಾಘ್
ವಿದಾಮುಯಾರ್ಚಿ
2025 ಜನವರಿ 1 ರಿಂದ 2025 ಜುಲೈ 1 ರ ವರೆಗೆ ಬಿಡುಗಡೆಯಾದ ಮತ್ತು ಕನಿಷ್ಠ 10,000 ಮತಗಳನ್ನು ಹೊಂದಿದ್ದು, 6 ಅಥವಾ ಅದಕ್ಕೂ ಹೆಚ್ಚು ಸರಾಸರಿ ಐಎಂಡಿಬಿ ಬಳಕೆದಾರರ ರೇಟಿಂಗ್ ಹೊಂದಿರುವ ಎಲ್ಲ ಸಿನಿಮಾಗಳ ಪೈಕಿ ಐಎಂಡಿಬಿ ಗ್ರಾಹಕರಲ್ಲಿ ಈ ಸಿನಿಮಾಗಳು ನಿರಂತರವಾಗಿ ಜನಪ್ರಿಯವಾಗಿದ್ದವು. ವಿಶ್ವದ ಎಲ್ಲೆಡೆಯಿಂದ 250 ಮಿಲಿಯನ್‌ಗೂ ಹೆಚ್ಚು ಐಎಂಡಿಬಿ ವೀಕ್ಷಕರು ನಡೆಸಿದ ಪುಟ ವೀಕ್ಷಣೆಯನ್ನು ಇವು ಆಧರಿಸಿವೆ.
 
ಅತ್ಯಂತ ನಿರೀಕ್ಷಿತ ಭಾರತೀಯ ಸಿನಿಮಾಗಳು: ಜುಲೈ- ಡಿಸೆಂಬರ್ 2025:
ಕೂಲಿ
ವಾರ್ 2
ದಿ ರಾಜಾ ಸಾಬ್
ಆಂಖೋ ಕಿ ಗುಸ್ತಾಖಿಯಾಂ
ಸೈಯಾರಾ
ಬಾಘಿ 4
ಸನ್ ಆಫ್ ಸರ್ದಾರ್ 2
ಹೃದಯಪೂರ್ವಮ್
ಮಹಾವತಾರ ನರಸಿಂಹ
ಆಲ್ಫಾ
ಈ ವರ್ಷ ಬಿಡುಗಡೆಯಾಗುತ್ತದೆ ಎಂದು ನಿರೀಕ್ಷಿಸಲಾಗಿರುವ ಭಾರತೀಯ ಸಿನಿಮಾಗಳ ಪೈಕಿ 2025 ಜನವರಿ 1 ರಿಂದ 2025 ಜುಲೈ 1 ರ ವರೆಗೆ ಈ ಸಿನಿಮಾಗಳ ಹೆಸರುಗಳು ನಿರಂತರವಾಗಿ ಐಎಂಡಿಬಿ ಗ್ರಾಹಕರಲ್ಲಿ ಅತ್ಯಂತ ಜನಪ್ರಿಯವಾಗಿದ್ದವು. ವಿಶ್ವದ ಎಲ್ಲೆಡೆಯಿಂದ 250 ಮಿಲಿಯನ್‌ಗೂ ಹೆಚ್ಚು ಐಎಂಡಿಬಿ ವೀಕ್ಷಕರು ನಡೆಸಿದ ಪುಟ ವೀಕ್ಷಣೆಯನ್ನು ಇವು ಆಧರಿಸಿವೆ.
 
ಮೋಹನ್‌ಲಾಲ್, ಅಜಯ್‌ ದೇವಗನ್ ಮತ್ತು ಪೂಜಾ ಹೆಗ್ಡೆ ಅವರು ನಟಿಸಿರುವ ಪ್ರಾಜೆಕ್ಟ್‌ಗಳು ಎರಡೂ ಪಟ್ಟಿಗಳಲ್ಲಿ ಕಾಣಿಸಿಕೊಂಡಿರುವುದನ್ನು ಗಮನಿಸಬಹುದು. ಮೋಹನ್‌ಲಾಲ್ ಅವರು ಎಲ್‌2: ಎಂಪುರಾನ್‌ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಮತ್ತು ಹೃದಯಪೂರ್ವಮ್‌ನಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ. ಪೂಜಾ ಹೆಗ್ಡೆ ಅವರು ದೇವಾ ಮತ್ತು ರೆಟ್ರೋದಲ್ಲಿ ಕಾಣಿಸಿಕೊಂಡಿದ್ದು, ಕೂಲಿಯಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಅಜಯ್‌ ದೇವಗನ್ ರೇಡ್ 2 ದಲ್ಲಿ ಕಾಣಿಸಿಕೊಂಡಿದ್ದು, ಸನ್ ಆಫ್ ಸರ್ದಾರ್ 2 ದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಜುಲೈ ತಿಂಗಳಲ್ಲಿ ಅತ್ಯಂತ ನಿರೀಕ್ಷಿತ ಹೊಸ ನಟ ಅಹಾನ್ ಪಾಂಡೆ ಅವರ ಸೈಯಾರಾ ಹಾಗೂ ಶನನ್ಯಾ ಕಪೂರ್ ಅವರ ಆಂಖೋ ಕಿ ಗುಸ್ತಾಖಿಯಾಂ ಕೂಡ ಪಟ್ಟಿಯಲ್ಲಿದೆ.
 
2025 ರಲ್ಲಿ ಈವರೆಗೆ ಅತ್ಯಂತ ಜನಪ್ರಿಯ ಭಾರತೀಯ ಸಿನಿಮಾಗಳ ಪೈಕಿ ಆರು ಹಿಂದಿ ಸಿನಿಮಾಗಳಾಗಿದ್ದು, ಮೂರು ತಮಿಳು ಮತ್ತು ಒಂದು ಮಲಯಾಳಂ ಸಿನಿಮಾ ಇದೆ. ಅತ್ಯಂತ ನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಆರು ಹಿಂದಿ ಸಿನಿಮಾಗಳು ಮತ್ತು ತಮಿಳು, ತೆಲುಗು ಮತ್ತು ಮಲಯಾಳಂ ಉದ್ಯಮದ ತಲಾ ಒಂದೊಂದು ಸಿನಿಮಾಗಳು ಇರಲಿವೆ. ಇನ್ನು, ಮಹಾವತಾರ ನರಸಿಂಹ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. 
 
2025 ರಲ್ಲಿ ಈವರೆಗಿನ ಜನಪ್ರಿಯ ಭಾರತೀಯ ಸಿನಿಮಾಗಳ ಬಗ್ಗೆ ಇನ್ನಷ್ಟು ತಿಳಿಯಲು ಈ ವೀಡಿಯೋ ವೀಕ್ಷಿಸಿ ಮತ್ತು ಇಲ್ಲಿ ಸಂಪೂರ್ಣ ಪಟ್ಟಿಯನ್ನು ನೋಡಬಹುದು. 
 
2025 ಜುಲೈ ಇಂದ ಡಿಸೆಂಬರ್‌ವರೆಗಿನ ಅತ್ಯಂತ ನಿರೀಕ್ಷಿತ ಭಾರತೀಯ ಸಿನಿಮಾಗಳ ಬಗ್ಗೆ ಇನ್ನಷ್ಟನ್ನು ತಿಳಿಯಲು ಈ ವೀಡಿಯೋ ವೀಕ್ಷಿಸಿ ಮತ್ತು ಇಲ್ಲಿ ಸಂಪೂರ್ಣ ಪಟ್ಟಿಯನ್ನು ನೋಡಬಹುದು. 
 
ಐಎಂಡಿಬಿ ಗ್ರಾಹಕರು ಈ ಸಿನಿಮಾಗಳನ್ನು ಹಾಗೂ ಇತರ ಲಕ್ಷಾಂತರ ಜನಪ್ರಿಯ ಸಿನಿಮಾಗಳನ್ನು ಮತ್ತು ವೆಬ್‌ ಸಿರೀಸ್‌ಗಳನ್ನು ತಮ್ಮ ವಾಚ್‌ಲಿಸ್ಟ್‌ಗೆ https://www.imdb.com/watchlist ನಲ್ಲಿ ಸೇರಿಸಬಹುದು. ಅಭಿಮಾನಿಗಳು ವೀಕ್ಷಿಸಲು ಬಯಸಿರುವುದನ್ನು ಟ್ರ್ಯಾಕ್ ಮಾಡಿಟ್ಟುಕೊಳ್ಳಲು ಸಹಾಯ ಮಾಡುವ ಉದ್ದೇಶದಿಂದ ಐಎಂಡಿಬಿ ವಾಚ್‌ಲಿಸ್ಟ್‌ ಸೌಲಭ್ಯವನ್ನು ಒದಗಿಸಲಾಗಿದೆ. ವೀಕ್ಷಿಸಲು ಬಯಸುವ ಸಿನಿಮಾಗಳು ಮತ್ತು ವೆಬ್‌ ಸಿರೀಸ್‌ಗಳ ವೈಯಕ್ತಿಕ ಪಟ್ಟಿಯನ್ನು ರಚಿಸಲು ಇದು ಗ್ರಾಹಕರಿಗೆ ಸಹಾಯ ಮಾಡಲಿದೆ. ಐಎಂಡಿಬಿ ರೇಟಿಂಗ್, ಜನಪ್ರಿಯತೆ ಮತ್ತು ಇತರೆ ಆಧಾರದಲ್ಲಿ ಗ್ರಾಹಕರು ತಮ್ಮ ವಾಚ್‌ಲಿಸ್ಟ್ ಅನ್ನು ಕ್ರಮಗೊಳಿಸಬಹುದು.
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ