ರಣಬೀರ್ ಜೊತೆ ನನ್ನ ಮದುವೆನಾ ? ಯಾರು ನಿಮಗೆ ಹೇಳಿದ್ದು- ಕತ್ರಿನಾ ಕೈಫ್
ಶನಿವಾರ, 29 ಮಾರ್ಚ್ 2014 (09:40 IST)
PR
ಅಂತೂ ಇಂತೂ ಅಜಬ್ ಪ್ರೇಂ ಕಿ ಗಜಬ್ ಕಹಾನಿಗೊಂದು ಅಂತ್ಯ ದೊರಕಿದೆ ಎನ್ನುವ ಸುದ್ದಿ ಈಗ ಬಾಲಿವುಡ್ ನಲ್ಲಿ ಓಡಾಡುತ್ತಿದೆ. ನಾವು ಹೇಳ್ತಾ ಇರೋದು ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ಅವರ ಮದುವೆ ಸಂಗತಿ. ಅಂತಿಮವಾಗಿ ಅವರು ಮದುವೆ ಆಗ್ತಾರೆ ಎನ್ನುವ ಸುದ್ದಿಯದ್ದೆ ಕಾರುಬಾರು.
ಇಷ್ಟು ದಿನಗಳಿಂದ ಸ್ವಲ್ಪ ದೂರ ಇದ್ದ ಈ ಜೋಡಿಯನ್ನು ಒಂದು ಮಾಡಲು ಅನೇಕ ಹಿರಿಯ ನಟರು ಪಾಡು ಪಟ್ಟಿದ್ದರು . ಆದರೆ ಅದೀಗ ಅಂತಿಮ ಸುತ್ತು ಪಡೆದಿದೆ. ಈ ಜೋಡಿ ಮುಂದಿನ ವರ್ಷ ಮದುವೆ ಆಗ್ತಾ ಇದ್ದಾರೆ ಎನ್ನುವ ಸುದ್ದಿ ಹರಡಿದೆ. ಮದುವೆ ಬಗ್ಗೆ ರಣಬೀರ್ ತಾಯಿಗೆ ಖುಷಿ ಆಗಿದ್ದು, ಆಕೆ ತನ್ನ ಮಗನ ವಿವಾಹಕ್ಕೆ ಸಂಬಂಧಪಟ್ಟಂತೆ ಶಾಪಿಂಗ್ ಆರಂಭ ಮಾಡಿದ್ದಾರಂತೆ.
ಕಳೆದ ವರ್ಷ ಈ ಜೋಡಿ ಸ್ಪೇನ್ ನಲ್ಲಿ ಒಟ್ಟಾಗಿದ್ದ ಕತೆಯನ್ನು ಪತ್ರಿಕೆಯೊಂದು ಬೆತ್ತಲು ಮಾಡಿತ್ತು. ಆದಾದ ಬಳಿಕ ಇವರಿಬ್ಬರು ಹೊಸ ವರ್ಷದ ಆಚರಣೆಗೆಂದು ನ್ಯೂಯಾರ್ಕ್ ದೇಶಕ್ಕೆ ಹೋಗಿದ್ದರು.