ಸನ್ನಿ ಲಿಯೋನ್‌ಗೆ ರಜನಿ ಜೊತೆ ಕುಣಿಯೋ ಆಸೆಯಂತೆ

ಸೋಮವಾರ, 31 ಮಾರ್ಚ್ 2014 (16:32 IST)
ಕೆನಡಾ ಮೂಲದ ನಟಿ ಸನ್ನಿ ಲಿಯೋನ್ ಇತ್ತೀಚೆಗೆ ಬೆಂಗಳೂರಿಗೆ ಬಂದು ದಿನವೆಲ್ಲಾ ಅಡ್ಡಾಡಿ ಬಳಿಕ ಬರ್ಲೆನ್ಗೆ ಹಾರಿದ್ದು ಈಗ ಹಳೇ ಸುದ್ದಿ. ಈ ಸಂದರ್ಭ ಅವರು ತಮ್ಮ ಮನದಾಳದ ಬಯಕೆಗಳನ್ನು ಬಹಿರಂಗಗೊಳಿಸಿದ್ದಾರೆ. ಫೊರ್ನ್ ಚಿತ್ರಗಳ ಮೂಲಕ ವಿಶ್ವವಿಖ್ಯಾತಿ ಪಡೆದಿದ್ದ ಸನ್ನಿ ಬಾಲಿವುಡ್ನಲ್ಲಿ ಈಗ ನೆಲೆ ಕಾಣುತ್ತಿರುವುದು ನಿಮಗೆಲ್ಲಾ ಗೊತ್ತಿದೆ. ಜಿಸ್ಮ್ 2, ಶೂಟ್ ಔಟ್ ವಡಾಲಾ ಬಳಿಕ ರಾಗಿಣಿ ಎಂಎಂಎಸ್ 2, ಜಾಕ್ಪಾಟ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಜಾಕ್ಪಾಟ್ ಚಿತ್ರದಲ್ಲಿ ಇತ್ತೀಚೆಗೆ ಮದುವೆಯಾಗಿರುವ ಭರತ್ ಜೊತೆ ಸನ್ನಿ ನಟಿಸುತ್ತಿದ್ದಾರೆ.

ಭರತ್ ಅವರಿಂದ ಸನ್ನಿ ರಜನಿಕಾಂತ್ ಬಗ್ಗೆ ಮಾಹಿತಿ ಕಲೆ ಹಾಕುತಿದ್ದಾರಂತೆ. ಸನ್ನಿ ಈಗ ರಜನಿ ಜಪ ಮಾಡುತ್ತಿದ್ದಾರಂತೆ ಎಂಬ ಸುದ್ದಿ ಬಾಲಿವುಡ್ ತುಂಬೆಲ್ಲಾ ಹರಿದಾಡುತ್ತಿದೆ. ರಜನಿಕಾಂತ್ ಸಿಗರೇಟ್ ಸೇದುವುದನ್ನು ಕಣ್ಣಾರೆ ನೋಡಬೇಕೆಂಬ ಬಯಕೆ ನನ್ನನ್ನು ಕಾಡುತ್ತಿದೆ ಎಂದು ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ರಜನಿ ಅವರ ಶಿಸ್ತು, ಸಮಯಪ್ರಜ್ಞೆ, ಕೌಶಲ್ಯ ಬಗ್ಗೆ ನನಗೆ ಭರತ್ ಅವರಿಂದ ಹೆಚ್ಚು ಮಾಹಿತಿ ಸಿಕ್ಕಿತು. ಅವರಿಗೆ ಉತ್ತಮ ಕಾಮಿಡಿ ಸೆನ್ಸ್ ಇದೆ. ಅವರ ಡ್ಯಾನ್ಸ್-ಸಾಂಗ್ ಸ್ಟೈಲ್ಗೆ ನಾನು ಮರುಳಾಗಿದ್ದೇನೆ. ಅವರ ಸಿಗರೇಟ್ ಟ್ರಿಕ್ಸ್ ಬಗ್ಗೆ ಕೇಳಿದ್ದೇನೆ. ಅದನ್ನು ನಾನು ಕಣ್ಣಾರೆ ನೋಡಬೇಕೆಂದಿದ್ದೇನೆ ಎಂದಿದ್ದಾರೆ ಸನ್ನಿ. ರಜನಿ ಅವರೊಂದಿಗೆ ಯಾವ ಪಾತ್ರದಲ್ಲಾದರೂ ಸರಿ ನಟಿಸಲು ನಾನು ತಯಾರಿದ್ದೇನೆ. ಅವರೊಂದಿಗೆ ಹಾಡಿ ಕುಣಿಯುವ ದೃಶ್ಯವಿದ್ದರೆ ನನ್ನ ಬಯಕೆ ಈಡೇರುತ್ತದೆ. ಇದಕ್ಕೆಲ್ಲಾ ಯಾವಾಗ ಕಾಲ ಕೂಡಿ ಬರುತ್ತದೋ ನೋಡೋಣ ಎಂದಿದ್ದಾರೆ ಸನ್ನಿ.

ವೆಬ್ದುನಿಯಾವನ್ನು ಓದಿ