ಸಾರ ಸಿನಿಮಾದಲ್ಲಿ ನಟಿಸಲ್ಲ ಎಂದಿದ್ದಾರೆ ಕರೀನಾ ಕಪೂರ್ ... ಆಕೆ ಯಾಕೆ ನಟಿಸಲ್ಲ ಅಂದ್ರೆ !

ಶನಿವಾರ, 29 ಮಾರ್ಚ್ 2014 (09:43 IST)
PR
ಪಟೌಡಿ ಕುಟುಂಬದ ಈಗಿನ ಚಿಗುರಾದ ಸಾರ ಬಗ್ಗೆ ಅವರ ಮಲತಾಯಿ ಕರೀನ ಕಪೂರ್ ಗೆ ಎಷ್ಟು ಹೇಳಿದರು ಸಾಕಾಗುತ್ತಿಲ್ಲ. ಆಕೆಗೆ ಈಗ 17ವರ್ಷ. ಸೈಫ್ ಅಲಿ ಖಾನ್ ಅವ್ರ ಮೊದಲ ಪತ್ನಿ ಅಮೃತ ಸಿಂಗ್ ಮಗಳಾದ ಸಾರ ಖಾನ್ ಈಗ ಸಿನಿಮಾದಲ್ಲಿ ನಟಿಸಲು ಸಿದ್ಧ ಆಗಿದ್ದಾಳ ಎನ್ನುವ ಮೀಡಿಯ ಚಿಂತೆಗೆ ಕರೀನ ಕಡೆಯಿಂದ ಇಲ್ಲ ಅನ್ನುವ ಉತ್ತರ ದೊರಕಿದೆ.

ಇತ್ತೀಚಿನ ಒಂದು ಸಂದರ್ಶನದಲ್ಲಿ ಆಕೆ ಸಾರ ಬಗ್ಗೆ ಹೇಳುತ್ತಾ ಸಾರಾ ಕೊಲಂಬಿಯ ಯುನಿವರ್ಸಿಟಿಯಲ್ಲಿ ಓದುತ್ತಿದ್ದಾಳೆ. ನ್ಯೂಯಾರ್ಕ್ ನಲ್ಲಿ ಇರುವ ಈ ಯುನಿವರ್ಸಿಟಿ ವಿಶ್ವದ ಬೆಸ್ಟ್ ಗಳಲ್ಲಿ ಒಂದಾಗಿದೆ.

ಅಂತಹ ಕಡೆ ತನ್ನ ಮಗಳು ಓದುತ್ತಿರುವುದಕ್ಕೆ ಅವರ ಅಪ್ಪ ಸೈಫ್ ಗೆ ಸಿಕ್ಕಾಪಟ್ಟೆ ಹೆಮ್ಮೆ ಇದೆ. ಆಕೆಗೆ ಓದಿನ ಬಗ್ಗೆ ಹೆಚ್ಚಿನ ಆಸಕ್ತಿ. ಆದ್ದರಿಂದ ಸಿನಿಮಾ ಬಗ್ಗೆ ಯಾವುದೇ ಆಸಕ್ತಿ ಇಲ್ಲ ಎನ್ನುವ ಮಾತನ್ನು ಹೇಳಿದ್ದಾರೆ ಕರೀನಾ
PR

ಇದರಿಂದ ಅಪ್ಪ ಸೈಫ್ ಗೆ ಸ್ವಲ್ಪ ಮಟ್ಟಿಗೆ ಬೇಸರ ಕಾದಿದ್ದು ಸತ್ಯ ಅಂತಾರೆ ಕರೀನ. ಕಳೆದ ವರ್ಷ ಸಾರ ಅಂಬಾನಿ ಪಾರ್ಟಿ ಯಲ್ಲಿ ಮಾಡೆಲ್ ಆಗಿದ್ದಳು. ಅದಾದ ಬಳಿಕ ಈಕೆ ಯಶ್ ಚೋಪ್ರ ಅವರ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ ಎಂದು ಸುದ್ದಿ ಹರಡಿತ್ತು. ಆದರೆ ಇವೆಲ್ಲಕ್ಕೂ ಒಂದು ಉತ್ತರ ದೊರಕಿದೆ..

ವೆಬ್ದುನಿಯಾವನ್ನು ಓದಿ