ಹಾಟ್ ಹಾಟ್ ಮಲ್ಲಿಕಾ ಶೆರಾವತ್ ಸ್ವಯಂವರಕ್ಕೆ 63 ವಯಸ್ಸಿನ ವೃದ್ಧ

ಸೋಮವಾರ, 31 ಮಾರ್ಚ್ 2014 (16:34 IST)
ಬಾಲಿವುಡ್ ಹಾಟ್ ಬೆಡಗಿ ಕೇವಲ ಯುವಕರ ಕನಸಿನ ರಾಣಿ ಎಂದು ತಿಳಿದಿದ್ದರೆ ಅದು ಶುದ್ಧ ತಪ್ಪು.ಶೆರಾವತ್ ಸ್ವಯಂವರದಲ್ಲಿ ಭಾಗಿಯಾಗಲು 63 ವರ್ಷ ವಯಸ್ಸಿನ ಶ್ರೀಮಂತ ವೃದ್ಧ ಬಾಯಿ ಕಿಸಿದು ಅರ್ಜಿ ಹಾಕಿದ್ದಾನೆ.

ಮಲ್ಲಿಕಾ ಶೆರಾವತ್ ತನ್ನ ಕನಸಿನ ರಾಜನನ್ನು ರಿಯಲ್ಟಿ ಶೋ ಮೂಲಕ ಹುಡುಕಾಟ ಆರಂಭಿಸಲಿದ್ದಾಳೆ. ಮಲ್ಲಿಕಾಳನ್ನು ವಿವಾಹವಾಗುವ ಆಸೆಯಿಂದ ಸಾವಿರಾರು ಯುವ ಅಭಿಮಾನಿಗಳು ಈಗಾಗಲೇ ಅರ್ಜಿ ಹಾಕಿದ್ದಾರೆ. ಇದೀದ ಹೈದ್ರಾಬಾದ್ ಮೂಲದ 63 ವರ್ಷ ವಯಸ್ಸಿನ ಮಾಜಿ ಶಿಕ್ಷಕ ಕೂಡಾ ಅರ್ಜಿ ಸಲ್ಲಿಸಿರುವುದು ವಿಶೇಷವಾಗಿದೆ.

63 ವರ್ಷ ವಯಸ್ಸಿನ ವೃದ್ಧ ಸುದರ್ಶನ ರಿಯಲ್ಟಿ ಶೋ ಕಾರ್ಯಕ್ರಮದಲ್ಲಿ ಟಾಪ್- 30 ರಲ್ಲಿ ಸ್ಥಾನ ಪಡೆಯುವ ವಿಶ್ವಾಸ ಹೊಂದಿದ್ದಾನೆ. ಖಂಡಿತವಾಗಿ ಮಲ್ಲಿಕಾಳನ್ನು ವರಿಸುವ ಭರವಸೆ ಹೊಂದಿದ್ದಾನೆ.

63 ವರ್ಷ ವಯಸ್ಸಿನ ವೃದ್ಧ ಸುದರ್ಶನ್‌‌ರನ್ನು ಹಲವು ಬಾರಿ ಸಂಪರ್ಕಿಸುವ ಪ್ರಯತ್ನ ನಡೆಸಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ