ಸುಮಾರು 50ಕ್ಕೂ ಅಧಿಕ ಚಿತ್ರಗಳಲ್ಲಿ ತನ್ನ ರೂಪ ಮತ್ತು ಪ್ರತಿಭೆ ತೋರಿರುವ ನಟಿ ಚಾರ್ಮಿ. ಆಕೆ ಸಿನಿಮಾಗಾಲ್ಲಿ ಮಾತ್ರವಲ್ಲ ರಿಯಲ್ ಜೀವನದಲ್ಲೂ ಮಾಡ್ರನ್ ಆಗಿ ಇರುವಂತಹ ಹೆಣ್ಣು.
ಆದರೆ ಹಬ್ಬಗಳಲ್ಲಿ - ಪೂಜೆ ಮಾಡುವಾಗ ಮಾತ್ರ ಚಾರ್ಮಿ ಸಂಪೂರ್ಣವಾಗಿ ಸಾಂಪ್ರದಾಯಿಕ ಉಡುಪುಗಳನ್ನು ಮಾತ್ರ ಧರಿಸುತ್ತಾಳಂತೆ. ಇನ್ನು ಪೂಜೆಯ ಬಗ್ಗೆ ಹೇಳುವಷ್ಟೇ ಇಲ್ಲ, ಅಷ್ಟೊಂದು ದೈವಭಕ್ತೆ ಮತ್ತು ಆಚಾರ ವಿಚಾರ ಹೊಂದಿರುವ ಸುಂದರಿ.
PR
ಸಮಯ ಸಿಕ್ಕಲೆಲಾ ಆಕೆ ತಪ್ಪದೆ ದೇವಾಲಯಗಳಿಗೆ ಹೋಗ್ತಾಳಂತೆ. ಶೂಟಿಂಗ್ ಇಲ್ಲದ ಸಮಯದಲ್ಲಿ ಮನೆಯಲ್ಲೇ ದೇವರ ಪೂಜೆ ಮಾಡ್ತಾಳಂತೆ. 48ಗಂಟೆಗಳ ಆಕೆ ನಿರಂತರವಾಗಿ ಗುರುಗ್ರಂಥ್ ಸಾಹಿಬ್ ಓದುತ್ತಾಳಂತೆ. ಇವೆಲ್ಲವೂ ಟ್ವಿಟ್ ಮಾಡಿ ಜಗತ್ತಿಗೆ ತಿಳಿಸಿದ್ದಾಳೆ ಆ ಚೆಲುವೆ.
ಅದೇರೀತಿ ದೃಷ್ಟಿ ಆಗ ಬಾರದು ಎಂದು ಆಕೆ ಕೈಲಿ ಮಣಿಗಳ ಬಳೆಯನ್ನು ಧರಿಸುತ್ತಾಳಂತೆ. ತನ್ನನ್ನು ಅಭಿಮಾನಿಸುವ ವ್ಯಕ್ತಿ ಒಬ್ಬರು ಈ ಕಾಣಿಕೆ ನೀಡಿದ್ದಾರಂತೆ. ಆದರೆ ಅದು ಹೆಣ್ಣ-ಗಂಡ ಎನ್ನುವ ಅಂಶವನ್ನು ಹೇಳಿಲ್ಲ ಅನ್ನೋದೇ ಟಾಲಿವುಡ್ ಮಂದಿಯ ಕುಹಕ.. !