ದೂಕುಡು ಮತ್ತು ಸೀತಮ್ಮ ವಾಕಿಟ್ಲೋ ಸಿರಿ ಮಲ್ಲೆ ಚಟ್ಲು ಅನ್ನುವ ಎರಡು ಸೂಪರ್ ಡೂಪರ್ ಹಿಟ್ ನೀಡಿದ ಜೋಡಿ ಮಹೇಶ್ ಬಾಬು ಮತ್ತು ಸಮಂತ . ಆದರೆ ಅದ್ಯಾಕೋ ಮಹೇಶ್ ಬಾಬುಗೆ ಸಮಂತ ಜೊತೆ ನಟಿಸುವ ಯಾವ ಆಸಕ್ತಿಯು ಉಳಿದಿಲ್ಲ. ಅದಕ್ಕೆ ಕಾರಣ ಆಕೆಯ ಮಾತಿನ ಶೈಲಿ.
ಇತ್ತೀಚೆಗೆ ಬಿಡುಗಡೆ ಆದ ಮಹೇಶ್ ಬಾಬು ವನ್ ಚಿತ್ರದ ಬಗ್ಗೆ ಸಮಂತ, ಬಾಯಿಗೆ ಬಂದಂತೆ ಮಾತಾಡಿ ಪ್ರಿನ್ಸ್ ಕೋಪಕ್ಕೆ ಗುರಿ ಆಗಿದ್ದಳು. ಸಾಮಾನ್ಯವಾಗಿ ಯಾವುದೇ ಬಗೆಯ ಗಾಸಿಪ್ಸ್ ಬೆಳೆಯಲು ಅವಕಾಶ ನೀಡದ ಮಹೇಶ್ ಬಾಬು ತಮ್ಮ ಚಿತ್ರಗಳಲ್ಲಿ ನಟಿಸುವಾಗ ಕೆಲವು ಸಂಗತಿಗಳಿಗೆ ಆದ್ಯತೆ ನೀಡುತ್ತಾರೆ. ಅದರಲ್ಲಿ ಹೀರೋಯಿನ್ ಆಯ್ಕೆ.