ಬಾಲಿವುಡ್‌ನಲ್ಲಿ ಬದಲಾದ ಸನ್ನಿ ಲಿಯೋನ್ ಅದೃಷ್ಟ

ಸೋಮವಾರ, 31 ಮಾರ್ಚ್ 2014 (16:08 IST)
ಒಬ್ಬೊಬ್ಬರ ಅದೃಷ್ಟ ಹೇಗಿರುತ್ತದೆ ಎನ್ನುವುದಕ್ಕೆ ಉತ್ತಮ ಉದಾಹರಣೆ ಸನ್ನಿ ಲಿಯೋನ್. ಬಾಲಿವುಡ್ಗೆ ಅವರು ಕಾಲಿಟ್ಟಿದ್ದೇ ತಡ, ಅವರ ಅದೃಷ್ಟದ ಕದ ತೆರೆದಂತಾಗಿದೆ. ಒಂದಾದ ಬಳಿಕ ಒಂದರಂತೆ ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದಿವೆ. ಅದರಲ್ಲೂ ವಿಭಿನ್ನ ಪಾತ್ರಗಳೇ ಅವರ ಮುಂದಿದೆ. ಈ ಮೂಲಕ ಪೋನರ್್ತಾರೆ ಎಂಬ ಹಣೆಪಟ್ಟಿ ತೆಗೆದು ಹಾಕಿದ್ದಾರೆ. ಇದೀಗ ಮುಂದಿನ ಚಿತ್ರಕ್ಕಾಗಿ ಸನ್ನಿ ಸ್ಟಂಟ್ಗಳನ್ನು ಕಲಿಯುತ್ತಿದ್ದಾರೆ. ಅದಕ್ಕಾಗಿ ಸಿಕ್ಕಾಪಟ್ಟೆ ವಕರ್ೌಟ್ ಕೂಡಾ ಮಾಡುತ್ತಿದ್ದಾರಂತೆ.

ಆಕ್ಷನ್ ಮೂವಿಗೂ ಸನ್ನಿ ಈ ಮೂಲಕ ತಯಾರಾಗುತ್ತಿದ್ದಾರೆ. ಒಂದು ತಿಂಗಳಿನಿಂದ ಇದಕ್ಕಾಗಿ ವರ್ಕೌಟ್ ಮಾಡಿರುವ ಸನ್ನಿ ಇದೀಗ ಕ್ಯಾಮೆರಾ ಎದುರು ಸಾಹಸ ಪ್ರದರ್ಶನ ಮಾಡಿದ್ದಾರೆ. ಸಹ ನಟಿ ಕರಿಷ್ಮಾ ತನ್ನಾ ಅವರೊಂದಿಗೆ ಇತ್ತೀಚೆಗೆ ಶೂಟಿಂಗ್ ಮುಗಿಸಿದ್ದಾರೆ. ಸನ್ನಿ ಈವರೆಗೆ ಕಾಣಿಸಿಕೊಂಡಿದ್ದಕ್ಕಿಂತ ತೀರಾ ವಿಭಿನ್ನವಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹಾಗಾಗಿ ಈವರೆಗೆ ಅವರ ಬಗ್ಗೆ ಬರೆಯುವಾಗ ಮಾದಕ ತಾರೆ, ಪೋರ್ನ್ ತಾರೆ ಎಂದೆಲ್ಲಾ ಹೊಗಳುವ ಜೊತೆಗೆ ಆಕ್ಷನ್ ತಾರೆ ಎಂದೂ ಬರೆಯಬೇಕಾಗಬಹುದು ಎನ್ನುತ್ತಿದ್ದಾರೆ ಬಾಲಿವುಡ್ ಮಂದಿ.

ವೆಬ್ದುನಿಯಾವನ್ನು ಓದಿ