ಅದಿತಿ ರಾವ್ ಹೈದರಿಯ ಹೆಸರು ಕೇಳದವರು ಕಡಿಮೆಯೇ. ಮರ್ಡರ್ 3 ಚಿತ್ರದಲ್ಲಿ ಆಕೆಯನ್ನು ನೋಡಿದವರು ಸಖತ್ ಹಾಟ್ ಆಗಿದ್ದಾಳೆ ಎಂದಿದ್ದರು. ಆದರೆ ಈಗ ಅದಕ್ಕೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಅಕ್ಷಯ್ಕುಮಾರ್ ನಾಯಕನಾಗಿರುವ ಬಾಸ್ ಚಿತ್ರದಲ್ಲಿ ಬಿಕಿನಿ ಬೇಬ್ ಆಗಿ ಕಾಣಿಸಿಕೊಂಡಿದ್ದಾರೆ. ಹೊಸ ಚಿತ್ರದ ಬಗ್ಗೆ ಅವರು ಹೇಳುವುದಿಷ್ಟು. ನನ್ನನ್ನು ಮುಗ್ಧ ಹುಡುಗಿಯಾಗಿ, ಪಕ್ಕದ್ಮನೆ ಹುಡುಗಿಯಾಗಿ ನೀವು ಈಗಾಗಲೇ ನೋಡಿದ್ದಾರೆ. ಈಗ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾನೇನು ಇಮೇಜ್ ಬದಲಾವಣೆಗೆ ಪ್ರಯತ್ನಿಸುತ್ತಿಲ್ಲ. ವೈವಿಧ್ಯಮಯವಾಗಿ, ಬಹುಮುಖಿಯಾಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತೇನೆ. ನನ್ನ ನಟನೆ ಜನರ ಮನಸ್ಸಿನಲ್ಲಿ ಉಳಿದುಬಿಡಬೇಕು ಎಂಬುದು ನನ್ನಾಸೆ.
ಬಿಕಿನಿ ಹಾಕುವ ರೋಲ್ ಇದೆ ಎಂದು ನಿರ್ದೇಶಕರು ಹೇಳಿದಾಗ ಐದು ವಾರದ ಗಡುವು ಕೇಳಿದ್ದೆ. ಬಿಕಿನಿ ಬಾಡಿನ ಸೆಟ್ ಮಾಡಿಕೊಳ್ಳೋಕೆ ಅಷ್ಟು ಕಾಲಾವಕಾಶ ಅನಿವಾರ್ಯವಾಗಿತ್ತು. ನನಗಿರುವುದು ತುಂಬಾ ಮುಗ್ಧ ಮುಖ, ನನ್ನ ಈಗಿನ ಅವತಾರ ನೋಡಿ ಅಭಿಮಾನಿಗಳಿಗೆ ಅಚ್ಚರಿಯಾಗಬಹುದು. ಮುಗ್ಧತೆಯೂ ಒಂಥರಾ ಸೆಕ್ಸಿ ಎಂದು ನಂಬಿದವಳು ನಾನು. ಬಿಕಿನಿ ಹಾಕಿಕೊಂಡು ರ್ಯಾಂಪ್ ವಾಕ್ ಮಾಡೋದು ಅಥವಾ ಸೌಂದರ್ಯ ಸ್ಪರ್ದೇಯಲ್ಲಿ ಭಾಗವಹಿಸುವುದು ಅಂದರೆ ನನಗೆ ಮುಜುಗರ. ಆದರೆ ಇಲ್ಲಿ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವಾಗ ನನಗೆ ನಾಚಿಕೆ ಆಗಲಿಲ್ಲ, ನಾನು ಬಿಕಿನಿ ಹಾಕ್ಕೊಂಡಿದ್ದೇನೆ ಅನ್ನೋದನ್ನೇ ಮರೆತಿದ್ದೆ. ಸ್ಟೈಲಿಶ್ ಫಲ್ಗುಣಿ ಮತ್ತು ನಾನು ಜೊತೆಗೇ ಕೂತು ಪಿಂಕ್ ಮತ್ತು ಆರೇಂಜ್ ಬಿಕಿನಿ ಧರಿಸಲು ನಿರ್ಧರಿಸಿದೆ. ಅದು ನನ್ನ ಇಷ್ಟದ ಕಲರ್ ಕೂಡಾ ಹೌದು. ಬಾಸ್ ಚಿತ್ರದಲ್ಲಿ ಬಿಕಿನಿ ಹಾಕಬೇಕಾಗುತ್ತದೆ ಎಂದು ಅಮ್ಮನಿಗೂ ಗೊತ್ತಿತ್ತು. ನಾನೊಂದು ಮುಕ್ತ ಕುಟುಂಬದಲ್ಲಿ ಬೆಳೆದವಳು, ಹೀಗಾಗಿ ಬಿಕಿನಿಗೆ ಮನೆಯಲ್ಲಿ ಆಕ್ಷೇಪ ಇರಲಿಲ್ಲ ಎನ್ನುತ್ತಾರೆ ಅದಿತಿ ರಾವ್.