ಬಿಗ್ಬಾಸ್ 7ನಲ್ಲಿ ನೀಲಿ ಚಿತ್ರಗಳ ತಾರೆ ಪ್ರಿಯಾ ಅಂಜಲಿ ರೈ

ಸೋಮವಾರ, 31 ಮಾರ್ಚ್ 2014 (15:37 IST)
ಹಿಂದಿಯ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಇಂಡೋ ಕೆನಡಾ ಮೂಲದ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಕಾಲಿಟ್ಟಿದ್ದೇ ತಡ, ಕಾರ್ಯಕ್ರಮವೂ ಸೇರಿದಂತೆ ಕಿರುತೆರೆಯಲ್ಲಿ ಹೊಸ ಶಕೆ ಆರಂಭವಾಯಿತು. ಬಳಿಕ ಆಕೆ ಬಾಲಿವುಡ್ ಚಿತ್ರಗಳಲ್ಲೂ ಆಕೆಗೆ ಒಳ್ಳೆಯ ಅವಕಾಶಗಳು ಹುಡುಕಿಕೊಂಡು ಬಂದವು. ಈಗ ಮತ್ತೊಬ್ಬ ನೀಲಿ ಚಿತ್ರಗಳ ತಾರೆ ಪ್ರಿಯಾ ಅಂಜಲಿ ರೈ ಬಿಗ್ಬಾಸ್ ಮನೆಗೆ ಬರುವುದು ನಿಶ್ಚಯವಾಗಿದೆ. ಕಲರ್ಸ್ ಚಾನೆಲ್ನಲ್ಲಿ ನಟ ಸಲ್ಮಾನ್ ಖಾನ್ ನಡೆಸಿಕೊಡಲಿರುವ ಬಿಗ್ಬಾಸ್ ಸೀಸನ್ 7ಗೆ ಅಂಜಲಿ ಬರುವುದು ಖಾತ್ರಿಯಾಗಿದೆ.

ಯುಎಸ್ನಲ್ಲಿ ಅಂಜಲಿ ವಯಸ್ಕರ ಚಿತ್ರಗಳ ತಾರೆ ಎಂದೇ ಜನಪ್ರಿಯರಾಗಿದ್ದಾರೆ. ಬಿಗ್ಬಾಸ್ ಸೀಸನ್ 7 ಸೆಪ್ಟೆಂಬರ್ 15ರಿಂದ ಆರಂಭವಾಗಲಿದೆ. ಈ ಬಾರಿ ಮನೆಗೆ ಪ್ರವೇಶ ಪಡೆಯಲಿರುವವರ ಬಗ್ಗೆ ಈಗಾಗಲೇ ಸಾಕಷ್ಟು ಗಾಸಿಪ್ಗಳು ಹರಿದಾಡುತ್ತಿವೆ. ಅಂಜಲಿ ಹುಟ್ಟಿದ್ದು ದೆಹಲಿಯಲ್ಲಾದರೂ ಬಳಿಕ ಮಿನ್ನಿಸೋಡದ ಮಿನ್ನಿಪೊಲಿಸ್ಗೆ ಸ್ಥಳಾಂತರವಾದರು. ಅಮೆರಿಕಾ ಮೂಲದ ಪೋಷಕರು ಈಕೆಯನ್ನು ದತ್ತು ತೆಗೆದುಕೊಂಡಿದ್ದರು. 29ನೇ ವಯಸ್ಸಿನಲ್ಲೇ ನೀಲಿ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ ಅಂಜಲಿ ಅದಕ್ಕೂ ಮುನ್ನ 12 ವರ್ಷ ಸ್ಟ್ರಿಪ್ಪರ್-ಕ್ಯಾಬರೆ ನೃತ್ಯಗಾರ್ತಿಯಾಗಿದ್ದರು. ಲೈಫ್ಸ್ಟೈಲ್ ನಿಯತಕಾಲಿಕೆಯ ದಿ ಟಾಪ್ 100 ಹಾಟೆಸ್ಟ್ ಪೋರ್ನ್ ಸ್ಟಾರ್ಸ್ ರೈಟ್ ನೌ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಇತ್ತೀಚೆಗೆ ನೀಲಿ ಚಿತ್ರಗಳಲ್ಲಿ ಅಭಿನಯಿಸುವುದಿಲ್ಲ ಎಂಬ ನಿರ್ಧಾರ ಕೈಗೊಂಡಿರುವ ಅಂಜಲಿ ತಮ್ಮ ವೈಯುಕ್ತಿಕ ಜೀವನದ ಕಡೆಗೂ ಗಮನ ಹರಿಸುವುದಾಗಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ