ಬಿಗ್‌ಬಾಸ್‌ನಲ್ಲಿ ಬಟ್ಟೆ ಬಿಚ್ಚಿದ ನಟಿ ಮತ್ತೆ ರೆಡಿಯಾಗಿದ್ದಾಳೆ.!

ಸೋಮವಾರ, 31 ಮಾರ್ಚ್ 2014 (16:09 IST)
ಬಿಗ್ಬಾಸ್‌ ಶೋನಲ್ಲಿ ತನ್ನ ದೇಹಸಿರಿಯನ್ನು ಜನರ ಮುಂದೆ ಪ್ರದರ್ಶಿಸಿದ ಸೌಂದರ್ಯವತಿ ಇದೀಗ ಮುಂದಿನ ಬಿಗ್‌ಬಾಸ್‌ನಲ್ಲಿ ಭಾಗವಹಿಸಲು ಕಾತರದಿಂದ ಕಾಯ್ತಿದ್ದಾಳೆ. ಅಷ್ಟೇ ಅಲ್ಲ, ಆ ನಟೀಮಣಿಯ ಜೊತೆಗೆ ಕುಚ್‌ ಕುಚ್‌‌ ಮಾತುಗಳಾಡುತ್ತ ಹತ್ತಿರವಾಗಿದ್ದ ಗೆಳೆಯನೂ ಕೂಡ ಮತ್ತೆ ಬಿಗ್‌ಬಾಸ್‌ಗೆ ಎಂಟ್ರಿ ಕೊಡಲಿದ್ದಾರೆ.

ಇದೇ ಸೆಪ್ಟಂಬರ್‌ 15 ರಿಂದ ಬಿಗ್‌ಬಾಸ್‌ 7 ನೇ ಆವೃತ್ತಿ ಪ್ರಾರಂಭವಾಗುತ್ತಿದೆ. ಈ ಹಿಂದೆ 6 ನೇ ಅವೃತ್ತಿಯಲ್ಲಿ ಪಾಲ್ಗೊಂಡಿದ್ದ ಸ್ಪರ್ಧಿಗಳು ಇದರಲ್ಲಿ ನಟಿಸಲಿದ್ದಾರೆ ಅನ್ನೋ ಸುದ್ದಿಗಳು ಕೇಳಿ ಬಂದಿವೆ. ವಿವಾದಗಳನ್ನು ಬೇಕೆಂತಲೇ ಮೈಮೇಲೆ ಎಳೆದುಕೊಂಡಿದ್ದ ಇಮ್ರಾನ್‌ ಸಿದ್ದಿಕಿ, ದೇಹ ಸಿರಿಯನ್ನು ನೋಡುಗರಿಗೆ ಬಿಚ್ಚಿಟ್ಟ ಸಪ್ನ ಭವಾನಾನಿ ಮತ್ತು ರಾಜೀವ್‌ ಪೌಲ್‌ ಈ ಏಳನೇ ಆವೃತ್ತಿಯಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ.

ಸಪ್ನ ಭವಾನಾನಿ ಬಿಗ್‌ಬಾಸ್‌ ಆರನೇ ಆವೃತ್ತಿಯಲ್ಲಿ ಬಹಳಷ್ಟು ವಿವಾದಗಳ ಮೂಲಕ ಹೆಚ್ಚು ಸದ್ದು ಮಾಡಿದ್ದ ಸುಂದರಿ. ಬಿಗ್‌ಬಾಸ್‌ನಲ್ಲಿ ಜಗಳಗಂಟಿಯಾಗಿದ್ದು, ಎಲ್ಲರ ಜೊತೆ ಕಾಲು ಕೆರೆದುಕೊಂಡು ಕಿರಿಕ್ ಮಾಡುತ್ತಿದ್ದಳು. ಸಲ್ಮಾನ್‌ ಖಾನ್‌ ಜೊತೆಗೆ ಕಿರಿಕ್ ಮಾಡಿ ಭಾರಿ ಸದ್ದು ಮಾಡಿಕೊಂಡಿದ್ದ ಘಟವಾಣಿ ಈಕೆ. ವಿಭಿನ್ನ ಹೇರ್‌ ಸ್ಟೈಲ್, ವಿಚಿತ್ರ ವ್ಯಕ್ತಿತ್ವದ ಬೋಲ್ಡ್ ಹುಡುಗಿ ಏಳನೇ ಆವೃತ್ತಿಯಲ್ಲಿ ನಿಮ್ಮನ್ನು ಇನ್ನಷ್ಟು ಹಾಟ್‌ ಆಗಿ ರಂಜಿಸ್ತಾಳಾ ಅನ್ನೋದು ಸೋಮವಾರದಿಂದ ಗೊತ್ತಾಗುತ್ತೆ.

ವೆಬ್ದುನಿಯಾವನ್ನು ಓದಿ