ಲಾಕ್ಮೆ ವರ್ಷಕ್ಕೊಮ್ಮೆ ಫ್ಯಾಶನ್ ವೀಕ್ ಏರ್ಪಡಿಸಿ ಬಾಲಿವುಡ್ ಅಗ್ರಗಣ್ಯ ಮಾಡೆಲ್ಗಳನ್ನು ರ್ಯಾಂಪ್ ಮೇಲೆ ನಡೆಸುವುದು ಪ್ರತೀ ಬಾರಿಯೂ ನಡೆಯುತ್ತಿದೆ. ಅದರಂತೆ ಈ ಬಾರಿ ಮುಂಬೈನ ಪ್ರತಿಷ್ಠಿತ ಲಾಕ್ಮಿ ಫ್ಯಾಶನ್ ವೀಕ್ನಲ್ಲಿ ಬಾಲಿವುಡ್ನ ಬಹುತೇಕ ನಟ ನಟಿಯರು ಸೊಂಟ ಬಳುಕಿಸುತ್ತಾ ಹೆಜ್ಜೆ ಹಾಕಿದ್ದಾರೆ. ಬಾಲಿವುಡ್ನ ಸಿನಿಕುಟುಂಬಕ್ಕೂ ಫ್ಯಾಶನ್ ಲೋಕಕ್ಕೂ ಬಿಡಿಸಲಾರದ ನಂಟಿದೆ. ಸಾಮಾಜಿಕ ಕಾರ್ಯಕರ್ತರು ವಿಶೇಷ ಚೇತನದ ಮಕ್ಕಳೊಂದಿಗೆ ಬೆಕ್ಕಿನ ನಡಿಗೆ ಇಡುವುದು, ಹುಲಿ ಉಳಿಸಿ ಅಭಿಯಾನ ಸೇರಿದಂತೆ ಅನೇಕ ಸಂದೇಶ ಸಾರುವ ವಸ್ತ್ರ ವಿನ್ಯಾಸಗಳೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮದುವೆ ಹಾಗೂ ಶುಭ ಸಮಾರಂಭದ ದಿರಿಸುಗಳು ಈ ಬಾರಿಯ ಫ್ಯಾಶನ್ವೀಕ್ನ ವಿಶೇಷ ಆಕರ್ಷಣೆಯಾಗಿತ್ತು.
ಈ ಬಾರಿ ಫ್ಯಾಶನ್ವೀಕ್ನಲ್ಲಿ ಅರ್ಚನಾ ಕೊಚ್ಚಾರ್, ಕಾಬಿಯಾ ಶಾಸ್, ಶಂತನು ಹಾಗೂ ನಿಖಿಲ್, ವಿಕ್ರಂ ಪಡ್ನೀಸ್, ಪಲ್ಲವಿ ಜೈಪುರ್, ಸೌಮಿತ್ರ ಮಂಡೋಲ್, ಅಗ್ನಿಮಿತ್ರ ಪಾಲ್, ಸಂಜಯ್ ಹಿಂಗು, ಕುನಾಲ್ ರಾವಲ್, ಕೋಮಲ್ ಸೂದ್, ಮನೀಶ್ ಮಲ್ಹೋತ್ರಾ, ಅಸ್ಮಿತಾ ಮವರ್ಾ ಮೊದಲಾದವರು ಪಾಲ್ಗೊಂಡಿದ್ದರು. ಬಾಲಿವುಡ್ ನಟಿ ಯಾವಿ ಗೌತಮಿ ಬಿಳಿ ದಿರಿಸಿನಲ್ಲಿ ಕಂಗೊಳಿಸಿದರೆ ನಟ ನವಾಜುದ್ದೀನ್ ಸಿದ್ದಿಕಿ ಬೆಕ್ಕಿನ ಹೆಜ್ಜೆ ಹಾಕಿ ಫೊಟೋಗೆ ಫೋಸ್ ಕೊಟ್ಟರು. ಸಂಗೀತಗಾರ್ತಿ ಸೋನಾ ಮಹಾಪಾತ್ರ ಹೆಜ್ಜೆ ಹಾಕುತ್ತಲೇ ಕುಸಿದು ಕುಳಿತರು. ತುಂಬು ತೋಳಿನ ವಸ್ತ್ರ ಧರಿಸಿದ್ದ ಕರಿಷ್ಮಾ ಕಪೂರ್ ವಿಕ್ರಂ ಫಡ್ನಿಸ್ ಜೊತೆ ಹೆಜ್ಜೆ ಹಾಕಿದರು.