ಮಾ ಟೀವಿ ಮಾರಾಟಕ್ಕಿದೆ. ಇದರ ಓನರ್ ಅಕ್ಕಿನೇನಿ ನಾಗಾರ್ಜುನ ಅವರು ಅತಿ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದಾರೆ ಸೋನಿ ಚಾನೆಲ್ ಗೆ ಎನ್ನುವುದು ಸದ್ಯ ಟಾಲಿವುಡ್ ನಲ್ಲಿ ಹರಿದಾಡುತ್ತಿರುವ ಸುದ್ದಿ ಆಗಿದೆ. ಇದಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ ತೆಲುಗಿನಲ್ಲಿ ಮುಖ್ಯ ಮನೋರಂಜನಾ ವಾಹಿನಿಯಾದ ಮಾ ಟೀವಿಯು ಸಾಕಷ್ಟು ಡಬ್ಬಿಂಗ್ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಾ ಕಾಲ ತಲ್ಳುತ್ತಿತ್ತು.
PR
ಈಗ ಅದನ್ನು ಮಾರಾಟ ಮಾಡಲು ಅಕ್ಕಿನೇನಿ ನಾಗಾರ್ಜುನ ಸಿದ್ಧ ಆಗಿದ್ದಾರೆ. ಅದರ ಬೆಲೆ ಬರೋಬ್ಬರಿ 18000ಕೋಟಿ ರೂಪಾಯಿಗಳು . ಕಳೆದ ಎರಡು ವರ್ಷಗಳಿಂದ ಈ ವಾಹಿನಿ ಕೊಳ್ಳುವಿಕೆಯ ಬಗ್ಗೆ ಡೀಲಿಂಗ್ ನಡೆಯುತ್ತಿದ್ದು.. ಈಗ ಅಂತಿಮ ಹಂತಕ್ಕೆ ಬಂದು ತಲುಪಿದೆ ಎಂದೇ ಹೇಳ ಬಹುದಾಗಿದೆ.