ಕೆಜಿಎಫ್ 2 ಜೊತೆಗೆ ಪೈಪೋಟಿಗಿಳಿದ ಲಾಲ್ ಸಿಂಗ್ ಚಡ್ಡಾ
ಕೆಜಿಎಫ್ 2 ಸಿನಿಮಾವನ್ನು 2022 ರ ಏಪ್ರಿಲ್ 14 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಮೊದಲೇ ಘೋಷಿಸಿತ್ತು. ಇದೀಗ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಕೂಡಾ ಇದೇ ದಿನ ಬಿಡುಗಡೆ ಘೋಷಿಸಿದೆ.
ಈ ಹಿಂದೆ ಕೆಜಿಎಫ್ 1 ಸಿನಿಮಾ ಬಿಡುಗಡೆಯಾದಾಗ ಬಾಲಿವುಡ್ ನಲ್ಲಿ ಶಾರುಖ್ ಖಾನ್ ಅಭಿನಯದ ಜೀರೋ ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ಕೆಜಿಎಫ್ 2 ಸಿನಿಮಾ ಎದುರು ಲಾಲ್ ಸಿಂಗ್ ಚಡ್ಡಾ ಎದ್ದು ನಿಲ್ಲುತ್ತದೋ, ನೆಲಕಚ್ಚುತ್ತದೋ ಕಾದು ನೋಡಬೇಕು.