ಬೆಂಗಳೂರು: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಈಗಾಗಲೇ ತಮ್ಮ ಆನ್-ಸ್ಕ್ರೀನ್ ಕೆಮಿಸ್ಟ್ರಿಯಿಂದ ಎಲ್ಲರನ್ನೂ ಆಕರ್ಷಿಸಿದ್ದು, ಇದೀಗ ಅವರ ಆಫ್-ಸ್ಕ್ರೀನ್ ಬಾಂಡ್ ಅವರ ಅಭಿಮಾನಿಗಳ ಹೃದಯವನ್ನು ಗೆದ್ದಿದೆ.
ಕಳೆದ ಕೆಲ ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಾರೆಂಬ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಈಚೆಗೆ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇವರಿಬ್ಬರ ಕೆಮಿಸ್ಟ್ರಿ ನೋಡಿ ನೆಟ್ಟಿಗರು ನವ ವಧು ವರರ ಹಾಗೇ ಕಾಣುತ್ತಿದ್ದಾರೆಂದು ಕಮೆಂಟ್ ಮಾಡಿದ್ದಾರೆ.
ವದಂತಿ ಜೋಡಿಯು ಯುಎಸ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ವೀಡಿಯೊ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿದೆ ಮತ್ತು ಅಭಿಮಾನಿಗಳು ಅವರು ಒಟ್ಟಿಗೆ ಎಷ್ಟು ಮುದ್ದಾಗಿ ಕಾಣುತ್ತಿದ್ದಾರೆಂದು ಹೊಗಳಿದ್ದಾರೆ.
ಆಗಸ್ಟ್ 17 ರಂದು ನ್ಯೂಯಾರ್ಕ್‌ನಲ್ಲಿ ನಡೆದ 43 ನೇ ಇಂಡಿಯಾ ಡೇ ಪರೇಡ್ ಅನ್ನು ಮುನ್ನಡೆಸಿದ ನಂತರ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕೂಡ ಭಾರತ್ ಬಿಯಾಂಡ್ ಬಾರ್ಡರ್ಸ್ ಎಂಬ ಈವೆಂಟ್‌ನಲ್ಲಿ ಭಾಗವಹಿಸಿದ್ದರು. ಈವೆಂಟ್‌ನ ವೀಡಿಯೊ ಈಗ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವೀಡಿಯೊದಲ್ಲಿ, ರಶ್ಮಿಕಾ ಮತ್ತು ವಿಜಯ್ ಒಬ್ಬರನ್ನೊಬ್ಬರು ಎಷ್ಟು ಪ್ರೀತಿ ಹಾಗೂ ಕಾಳಜಿ ಮಾಡುತ್ತಾರೆಂದು ಕಾಣಬಹುದು.
ರಶ್ಮಿಕಾ ಪ್ರಕಾಶಮಾನವಾದ ಹಳದಿ ಸೀರೆಯಲ್ಲಿ ಮಿರ ಮಿರ ಮಿಂಚಿದರೆ, ವಿಜಯ್ ಕಂದು ಬಣ್ಣದ ಫಾರ್ಮಲ್ ಕೋಟ್ ಮತ್ತು ಪ್ಯಾಂಟ್‌ನಲ್ಲಿ ಕಾಣಿಸಿಕೊಂಡರು.
ವಿಡಿಯೋದಲ್ಲಿ ರಶ್ಮಿಕಾ ಅಲ್ಲೇ ಇದ್ದ ವ್ಯಕ್ತಿಗೆ ಕೈಕುಲುಕಿ ಶೇಕ್‌ಹ್ಯಾಂಡ್ ಮಾಡುತ್ತಿದ್ದನ್ನು ನೋಡಿ, ವಿಜಯ್ ಅದನ್ನು ತಡೆಯಲು ಹೋಗುತ್ತಾರೆ. ಇದನ್ನು ನೋಡಿದ ನೆಟ್ಟಿಗರು ವಿಜಯ್ ಗೆ ರಶ್ಮಿಕಾ ಮೇಲೆ ಎಷ್ಟೊಂದು ಪೊಸೆಸಿವ್ ಎಂದಿದ್ದಾರೆ. ಇವರಿಬ್ಬರನ್ನು ನೋಡುತ್ತಿದ್ದರೆ ನೂತನವಾಗಿ ಮದುವೆಯಾದ ಜೋಡಿಯ ಹಾಗೇ ಕಾಣಿಸುತ್ತಿದ್ದಾರೆ ಎಂದಿದ್ದಾರೆ