Sitare Zameen Par: ಸಿನಿಮಾ ಬಾಯ್ಕಾಟ್ ಭಯಕ್ಕೆ ಎಕ್ಸ್ ಪೇಜ್ ಗೆ ತ್ರಿವರ್ಣ ಧ್ವಜ ಹಾಕಿದ ಅಮೀರ್ ಖಾನ್ ಸಂಸ್ಥೆ
ಜೂನ್ 20 ರಂದು ಅಮೀರ್ ಖಾನ್ ಅಭಿನಯದ ಸಿತಾರೆ ಜಮೀನ್ ಪರ್ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ನಿಷೇಧದ ಬೆದರಿಕೆ ಎದುರಾಗಿದೆ. ಅಷ್ಟಕ್ಕೂ ಈ ಟ್ರೆಂಡ್ ಗೆ ಕಾರಣವೇನು ಇಲ್ಲಿದೆ ನೋಡಿ ವಿವರ.
ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ನಡೆಯುತ್ತಿದ್ದಾಗ ಟರ್ಕಿ ದೇಶ ಪಾಕ್ ಗೆ ಬೆಂಬಲ ನೀಡಿತ್ತು. ಇದೇ ಸಮಯದಲ್ಲಿ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಜೊತೆಗಿರುವ ವಿಡಿಯೋ ವೈರಲ್ ಆಗಿತ್ತು. ಹೀಗಾಗಿ ಅಮೀರ್ ಖಾನ್ ಸಿನಿಮಾಗೆ ನಿಷೇಧಿಸುವಂತೆ ಕರೆ ನೀಡಲಾಗುತ್ತದೆ.
ಇದರ ಬೆನ್ನಲ್ಲೇ ಚಿತ್ರತಂಡ ಎಚ್ಚೆತ್ತುಕೊಂಡಿದ್ದು, ಅಮೀರ್ ಖಾನ್ ಪ್ರೊಡಕ್ಷನ್ಸ್ ಸೋಷಿಯಲ್ ಮೀಡಿಯಾ ಎಕ್ಸ್ ಪೇಜ್ ಗೆ ಭಾರತದ ತ್ರಿವರ್ಣ ಧ್ವಜದ ಚಿತ್ರ ಹಾಕಿ ಸಮಾಧಾನಪಡಿಸುವ ಕೆಲಸ ಮಾಡಲಾಗಿದೆ. ಇತ್ತೀಚೆಗೆ ಪಹಲ್ಗಾಮ್ ದಾಳಿ ಬಗ್ಗೆಯೂ ಬಾಲಿವುಡ್ ಖಾನ್ ತ್ರಯರು ಪ್ರತಿಕ್ರಿಯಿಸಿಲ್ಲ ಎನ್ನುವುದರ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.