ಕೊರೋನಾಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ಬಂತು 14 ಲಕ್ಷ ರೂ.ಗಳ ಆಸ್ಪತ್ರೆ ಬಿಲ್!

ಮಂಗಳವಾರ, 30 ಜೂನ್ 2020 (10:38 IST)
ನೋಯ್ಡಾ: ಸರ್ಕಾರಗಳು ಖಾಸಗಿ ಆಸ್ಪತ್ರೆಗಳ ಹಣ ವಸೂಲಿಗೆ ಎಷ್ಟೇ ಕಡಿವಾಣ ಹಾಕಲು ಯತ್ನಿಸಿದರೂ ಕೆಲವೊಂದು ಆಸ್ಪತ್ರೆಗಳು ಇದಕ್ಕೆ ಕ್ಯಾರೇ ಎನ್ನುತ್ತಿಲ್ಲ. ಇಂತಹದ್ದೇ ಒಂದು ಘಟನೆ ನೋಯ್ಡಾದಲ್ಲಿ ನಡೆದಿದೆ.


ವ್ಯಕ್ತಿಯೊಬ್ಬ ಕೊರೋನಾಗಾಗಿ 20 ದಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆ ವ್ಯಕ್ತಿ ಮೃತಪಟ್ಟಿದ್ದಾರೆ. ಆದರೆ ಈ ಶಾಕ್ ಗಿಂತ ಅವರ ಕುಟುಂಬಕ್ಕೆ ಆಸ್ಪತ್ರೆ ನೀಡಿದ ಬಿಲ್ ದೊಡ್ಡ ಆಘಾತವೇ ನೀಡಿದೆ.

ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಆಸ್ಪತ್ರೆ 14 ಲಕ್ಷ ರೂ.ಗಳ ಬಿಲ್ ಕೈಗಿತ್ತಿದೆ. ಕೊನೆಗೆ ಕುಟುಂಬ ವರ್ಗ ಚೌಕಾಸಿ ನಡೆಸಿದ ಪರಿಣಾಮ 4 ಲಕ್ಷ ಕಡಿತ ಮಾಡಿ 10.2 ಲಕ್ಷ ರೂ.ಗಳ ಬಿಲ್ ನೀಡಿದೆ. ಆದರೆ ಅಷ್ಟು ಹಣವಿಲ್ಲದ ಕಾರಣ ಕುಟುಂಬ ವರ್ಗ ಆಸ್ಪತ್ರೆಯೊಂದಿಗೆ ಸ್ಟಾಂಪ್ ಪೇಪರ್ ಅಗ್ರಿಮೆಂಟ್ ಮಾಡಿಕೊಂಡು ಸದ್ಯಕ್ಕೆ 25 ಸಾವಿರ ರೂ.ಗಳನ್ನು ನೀಡಿ ಮೃತದೇಹ ಪಡೆದುಕೊಂಡಿದೆ. ಈ ಬಗ್ಗೆ ಸ್ಥಳೀಯಾಡಳಿತದ ಗಮನಕ್ಕೆ ತರಲಾಗಿದ್ದು, ಈ ವಿಚಾರದ ಕುರಿತು ಗಮನ ಹರಿಸುವುದಾಗಿ ಸ್ಥಳೀಯಾಡಳಿತ ಭರವಸೆ ನೀಡಿದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ