ಖ್ಯಾತ ನಟ ಅಮಿತಾಬ್ ಬಚ್ಚನ್ ಗೆ ಈ ಮೂವರು ನಟಿಯರ ಜೊತೆ ನಟಿಸಲು ಭಯವಾಗುತ್ತದೆಯಂತೆ!

ಶುಕ್ರವಾರ, 31 ಆಗಸ್ಟ್ 2018 (10:39 IST)
ಮುಂಬೈ : ತಮ್ಮ ಅಮೋಘವಾದ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿ ಬಾಲಿವುಡ್ ಸ್ಟಾರ್ ನಟ ಎಂದೇ ಪ್ರಸಿದ್ದರಾಗಿರುವ  ಹಿರಿಯ ನಟ ಅಮಿತಾಬ್ ಬಚ್ಚನ್ ಅವರಿಗೆ ಈಗಿನ ಯುವ ನಟ-ನಟಿಯರ ಜೊತೆ ನಟಿಸಲು ಭಯವಾಗುತ್ತದೆಯಂತೆ.

ಹೌದು. ಈ ವಿಚಾರವನ್ನು ಸ್ವತಃ  ನಟ ಅಮಿತಾಬ್ ಬಚ್ಚನ್ ಅವರೇ ಇತ್ತೀಚಿಗೆ ನಡೆದ ಪತ್ರಿಕಾಗೋಷ್ಟಿಯೊಂದರಲ್ಲಿ ಹೇಳಿದ್ದಾರೆ. ಈ ಪತ್ರಿಕಾಗೋಷ್ಟಿಯಲ್ಲಿ ನಟ ಅಮಿತಾಬ್ ಬಚ್ಚನ್ ಅವರನ್ನು ಕುರಿತು  ಚಿತ್ರರಂಗದಲ್ಲಿ ಈಗ ಮುಂಚೂಣಿಯಲ್ಲಿರುವ ನಾಯಕಿಯರ ಬಗ್ಗೆ ಹೇಳಿ ಎಂದಾಗ ಅವರು, ‘ನನಗೆ ಈಗಿನವರ ಜೊತೆ ಕೆಲಸ ಮಾಡಲು ಭಯ.


ಈಗಿನ ಯುವ ನಟ-ನಟಿಯರು ತುಂಬಾ ಬ್ರಿಲಿಯಂಟ್. ಅಲಿಯಾ ಭಟ್, ದೀಪಿಕಾ ಪಡುಕೋಣೆ ಮತ್ತು ಅನುಷ್ಕಾ ಶರ್ಮಾ ಇವರೆಲ್ಲಾ ಅದ್ಭುತ ನಟಿಯರು. ಇವರ ಜೊತೆ ಕೆಲಸ ಮಾಡಲು ಭಯವಾಗುತ್ತದೆ. ನಮ್ಮನ್ನು ನಾವು ಅಪ್ ಡೇಟ್ ಮಾಡಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ. ಈಗಿನವರು ಬೇಗ ಅಪ್ ಡೇಟ್ ಆಗಿರುತ್ತಾರೆ. ಆತ್ಮವಿಶ್ವಾಸದಿಂದ ಸೆಟ್ ಗೆ ಬರುತ್ತಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ