ನಟ ರಾಮ್ ಚರಣ್ ತೇಜ ಅಭಿನಯದ ‘ರಂಗಸ್ಥಳಂ' ಚಿತ್ರಕ್ಕೆ ಎದುರಾಗಿದೆ ಸಂಕಷ್ಟ
ಶುಕ್ರವಾರ, 1 ಜೂನ್ 2018 (06:33 IST)
ಹೈದರಾಬಾದ್ : ಟಾಲಿವುಡ್ ಖ್ಯಾತ ನಿರ್ದೇಶಕ ಸುಕುಮಾರ್ ಅವರು ನಿರ್ದೇಶಿಸಿರುವ ಸ್ಟಾರ್ ನಟ ರಾಮ್ ಚರಣ್ ತೇಜ ಅವರ ಅಭಿನಯದ ‘ರಂಗಸ್ಥಳಂ' ಚಿತ್ರ ಕೆಲದಿನಗಳ ಹಿಂದೆ ಬಿಡುಗಡೆಯಾಗಿ ಸೂಪರ್ ಹಿಟ್ ಚಿತ್ರ ಎನಿಸಿಕೊಂಡಿದ್ದರೂ ಕೂಡ ಇದೀಗ ಈ ಚಿತ್ರ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದೆ.
ಹೌದು. ಈ ಚಿತ್ರದ ಕ್ಲೈಮ್ಯಾಕ್ಸ್ ಸೀನನ್ನು ನಿರ್ದೇಶಕ ಸುಕುಮಾರ್ ಕಾಪಿ ಹೊಡೆದಿದ್ದಾರೆ ಎಂದು ಕಥೆ ಹಾಗು ಗೀತೆ ರಚನೆಕಾರ ಕೊಟ್ಟೇಶಾರಂ ಅವರು ರಚನೆಕಾರರ ಸಂಘಕ್ಕೆ ಆರೋಪ ಸಲ್ಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಇದೀಗ ರಚನೆಕಾರರ ಸಂಘದಿಂದ ಸುಕುಮಾರ್ ಅವರಿಗೆ ಚಿತ್ರದ ಕ್ಲೈ ಮ್ಯಾಕ್ಸ್ ಕುರಿತಾಗಿ ವಿವರಣೆ ನೀಡುವಂತೆ ಆದೇಶ ಹೊರಡಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸುಕುಮಾರ್ ಅವರು,’ ಕಥೆಗೆ ತಕ್ಕ ಹಾಗೆ ಆರೋಗ್ಯ ಪೂರ್ಣವಾಗಿ ಕ್ಲೈಮ್ಯಾಕ್ಸ್ ಅನ್ನು ರಚಿಸಿದ್ದೇನೆ ಇದರಲ್ಲಿ ಕೊಟ್ಟೇಶಾರಂ ಅವರ ಕಥೆಗಳಿಗೆ ಸಂಭಂದಿಸಿದಂತೆ ಯಾವುದೇ ಸನ್ನಿವೇಶಗಳನ್ನು ಹಾಗು ಸಾಲುಗಳನ್ನು ಕಾಪಿ ಹೊಡೆದಿಲ್ಲ ಎಂದು ಸ್ಪಷ್ಟಪಡಿಸುವುದರ ಮೂಲಕ ತಾವು ನೋಡಿರುವ ಕೆಲವು ಸಿನಿಮಾಗಳಲ್ಲಿ ಸಹ ಇದೇ ರೀತಿಯ ಸಾಲುಗಳು ಬರುತ್ತವೆ ಎಂದು ಸುಕುಮಾರ್ ಅವರು ವಿವರಣೆ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ