ರಾಜಕೀಯದತ್ತ ನಟ ರಿತೇಶ್ ದೇಶ್ ಮುಖ್ ಚಿತ್ತ

ಗುರುವಾರ, 12 ಜುಲೈ 2018 (12:23 IST)
ಮುಂಬೈ : ಬಾಲಿವುಡ್ ನಟ, ನಿರ್ಮಾಪಕ ರಿತೇಶ್ ದೇಶ್ ಮುಖ್ ಅವರು ಮುಂಬರುವ ಲೋಕಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದಾರಂತೆ.


ಮಹಾರಾಷ್ಟ್ರದ ಮಾಜಿ ಸಿಎಂ ವಿಲಾಸ್ ರಾವ್ ದೇಶ್ ಮುಖ್  ಅವರ ಪುತ್ರರಾದ ನಟ ರಿತೇಶ್ ದೇಶ್ ಮುಖ್ ಅವರು ಖ್ಯಾತ ನಟಿ ಜೆಲಿನಿಯಾ ಡಿಸೋಜ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ಈ ದಂಪತಿಗೆ ಈಗ  ಇಬ್ಬರು ಮಕ್ಕಳಿದ್ದಾರೆ. ಇವರು ಹಿಂದಿ ಹಾಗೂ ತೆಲುಗು ಸಿನಿಮಾದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.


ಇದುವರೆಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದ ರಿತೇಶ್ ಇದೀಗ ರಾಜಕೀಯದತ್ತ ಮುಖಮಾಡಿದ್ದಾರಂತೆ. 2019 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸ್ವಂತ ಊರಾದ ಲಾತೂರ್ ಕ್ಷೇತ್ರದಿಂದ ರಿತೇಶ್ ಸ್ಪರ್ಧಿಸಲು ಬಯಸಿದ್ದಾರಂತೆ. ಸದ್ಯಕ್ಕೆ ರಿತೇಶ್ 'ಧಮಾಲ್'  ಸಿನಿಮಾ ಶೂಟಿಂಗ್​​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅನಿಲ್ ಕಪೂರ್, ಮಾಧುರಿ ದೀಕ್ಷಿತ್ ಹಾಗೂ ಅಜಯ್ ದೇವಗನ್ ನಟಿಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ