ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಂತೆ ನಟ ಶಾಹಿದ್ ಕಪೂರ್

ಭಾನುವಾರ, 22 ಏಪ್ರಿಲ್ 2018 (06:25 IST)
ಮುಂಬೈ : ಬಾಲಿವುಡ್ ನಟ ಶಾಹಿದ್ ಕಪೂರ್ ಅವರು ಎರಡನೇ ಮಗುವಿಗೆ ತಂದೆಯಾಗುತ್ತಿದ್ದಾರಂತೆ. ಈ ಸಿಹಿಸುದ್ದಿಯನ್ನು ಅವರು  ತಮ್ಮ ಇನ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.


2015ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಶಾಹಿದ್ ಹಾಗೂ ಮಿರಾ ದಂಪತಿಗಳಿಗೆ ಈಗಾಗಲೇ ಒಂದೂವರೆ ವರ್ಷದ ಮಿಶಾ ಎಂಬ ಪುತ್ರಿಯಿರುವ ವಿಷಯ ಎಲ್ಲರಿಗೂ ತಿಳಿದೆ ಇದೆ. ಆದರೆ ಇದೀಗ ಈ ದಂಪತಿಗಳು  ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಶಾಹಿದ್ ಅವರು ತಮ್ಮ ಇನ್ಟಾಗ್ರಾಮ್ ನಲ್ಲಿ ಬಿಗ್ ಸಿಸ್ಟರ್ ಎಂಬ ಕ್ಯಾಪ್ಷನ್ ನೀಡಿ ಫೋಟೋ ಒಂದನ್ನು ಪೋಸ್ಟ್ ಮಾಡಿ, ಲಿಟಲ್ ಮಿಶಾ ಈಸ್ ಕಮ್ಮಿಂಗ್ ಸೂನ್ ಎಂದು ಹೇಳಿಕೊಂಡಿದ್ದರು. ಈ ಮೂಲಕ ತಾವು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, ತಮ್ಮ ಕುಟುಂಬಕ್ಕೆ ಶೀಘ್ರವೇ ಹೊಸ ಅತಿಥಿಯ ಆಗಮನವಾಗಲಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ