ಸೋಶಿಯಲ್ ಮಿಡಿಯಾದಲ್ಲಿ ನಟ ಪ್ರಭಾಸ್ ಗೆ ಅವಮಾನ ಮಾಡಿದ್ರಾ ನಟ ಸಿದ್ಧಾರ್ಥ?
ಗುರುವಾರ, 19 ಜುಲೈ 2018 (07:24 IST)
ಹೈದರಾಬಾದ್ : ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ಅವರಿಗೆ ಕಾಲಿವುಡ್ ನಟ ಸಿದ್ಧಾರ್ಥ ಅವರು ಟ್ವೀಟ್ವೊಂದರ ಮೂಲಕ ಅವಮಾನ ಮಾಡಿ ಪ್ರಭಾಸ್ ಅಭಿಮಾನಿಗಳ ಕೋಪಕ್ಕೆ ಕಾರಣರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಹಾಗಾದ್ರೆ ಆಗಿದ್ದೇನು ಗೊತ್ತಾ? ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ಅವರ ಹುಟ್ಟುಹಬ್ಬ ಅಕ್ಟೋಬರ್ 23 ರಂದು ನಡೆಯಲಿದ್ದು ಇದರ ಭಾಗವಾಗಿ ರಮೇಶ್ ಬಾಲಾ 'ಕೌಂಟ್ ಡೌನ್ ಪ್ರಾರಂಭ, ಪ್ರಭಾಸ್ ಬರ್ತ್ ಡೇಗೆ 100 ದಿನ ಬಾಕಿ' ಎನ್ನುವ ಹ್ಯಾಷ್ಟ್ಯಾಗ್ ಹಾಕಿ ಟ್ವಿಟ್ ಮಾಡಿದ್ದರು.
ಬಾಲಾ ಅವರ ಈ ಟ್ವಿಟ್ಗೆ ತಮಾಷೆಗಾಗಿ ನಟ ಸಿದ್ದಾರ್ಥ್ ಅವರು ಪ್ರಭಾಸ್ ಅವರ ಮುಂದಿನ ಹುಟ್ಟುಹಬ್ಬಕ್ಕೆ 465 ದಿನ ಬಾಕಿ ಉಳಿದಿದೆ ಎಂದು ಅಪಹಾಸ್ಯದ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಬಳಿಕ ಸ್ವಲ್ಪ ವಿವೇಚನೆಯಿಂದ ಟ್ವಿಟ್ ಮಾಡಿ ಎಂದು ಸಲಹೆ ಕೂಡ ನೀಡಿದ್ದಾರೆ.
ನಟ ಸಿದ್ದಾರ್ಥ್ ಅವರು ನಟ ಪ್ರಭಾಸ್ ಅವರ ವಿಷಯದಲ್ಲಿ ಈ ರೀತಿ ಟ್ವೀಟ್ ಮಾಡಿದ್ದು ಪ್ರಭಾಸ್ ಅಭಿಮಾನಿಗಳಿಗೆ ಇಷ್ಟವಾಗದ ಕಾರಣ ನಟ ಸಿದ್ದಾರ್ಥ್ ಅವರ ಮೇಲೆ ಕೋಪಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ