ನಟಿ ದೀಪಿಕಾ ಪಡುಕೋಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ನಟಿ ಅನುಷ್ಕಾ

ಮಂಗಳವಾರ, 15 ಮೇ 2018 (05:56 IST)
ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಕೇನ್ಸ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ನಲ್ಲಿ ವಾಕ್ ಮಾಡಿ ಸಖತ್ ಆಗಿ ಮಿಂಚಿದ್ದು, ಈ ಬಗ್ಗೆ ಇದೀಗ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ನಟಿ ದೀಪಿಕಾ ಪಡುಕೋಣೆ ಮತ್ತು ಅನುಷ್ಕಾ ಶರ್ಮಾ ಇಬ್ಬರ ನಡುವಿನ ಸಂಬಂದ ಸರಿಯಲ್ಲ ಎಂಬ ವದಂತಿ ಬಾಲಿವುಡ್ ಅಂಗಳದಲ್ಲಿ ಈ ಹಿಂದೆ ಕೇಳಿಬಂದಿತ್ತು, ಆದರೆ ಇದೀಗ ನಟಿ ಅನುಷ್ಕಾ  ಶರ್ಮಾ ಅವರು ಕೇನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗವಹಿಸಿದ ದೀಪಿಕಾ ಪಡುಕೋಣೆ ಅವರ ಸೌಂದರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದರ ಮೂಲಕ ಈ ಸುದ್ದಿಯನ್ನು ತಳ್ಳಿಹಾಕಿದ್ದಾರೆ.
ನಟಿ ಅನುಷ್ಕಾ  ಶರ್ಮಾ ಅವರು’ ದೀಪಿಕಾ ನೀವು ಕಾರ್ಪೆಟ್ನಲ್ಲಿ ಸಂಪೂರ್ಣವಾಗಿ ನಮ್ಮನ್ನು ಬೆರಗು ಗೊಳ್ಳಿಸಿದ್ದೀರಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಅದಕ್ಕೆ ದೀಪಿಕಾ ಪ್ರತಿಕ್ರಿಯಿಸಿದ ದೀಪಿಕಾ,  ‘ತುಂಬಾ ಧನ್ಯವಾದಗಳು ಅನುಷ್ಕಾ ! ಲೋಡ್ಸ್ ಆಫ್ ಲವ್’ ಎಂದು ಬರೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ