ಮೇ 13 ರಂದು ಡಬಲ್ ಸಂಭ್ರಮವನ್ನು ಅನುಭವಿಸಿದ ನಟಿ ಸನ್ನಿ ಲಿಯೋನ್
ಸೋಮವಾರ, 14 ಮೇ 2018 (08:09 IST)
ಮುಂಬೈ : ಬಾಲಿವುಡ್ ಬೆಡಗಿ ಮಾದಕ ನಟಿ ಸನ್ನಿ ಲಿಯೋನ್ ಅವರು ಈ ಬಾರಿ ಮೇ 13 ರಂದು ಡಬಲ್ ಸಂಭ್ರಮವನ್ನು ಅನುಭವಿಸಿದ್ದಾರೆ.
ಅದೇನೆಂದರೆ ಮೇ 13 ರಂದು ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ನಟಿ ಸನ್ನಿ ಲಿಯೋನಾ ಅವರು ಜೊತೆಗೆ ಈ ಬಾರಿ ತಾಯಂದಿರ ದಿನವನ್ನು ಬಹಳ ಸಂಭ್ರಮದಿಂದ ಆಚರಿಸಿದ್ದಾರೆ. ಯಾಕೆಂದರೆ ಈ ಬಾರಿ ಅವರು ಮೂರು ಮಕ್ಕಳ ತಾಯಿ ಎನಿಸಿಕೊಂಡಿದ್ದರು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸನ್ನಿ ಲಿಯೋನಾ ಅವರು,’ ನನ್ನ ಹುಟ್ಟಿದ ದಿನಾಂಕ ನನಗೆ ಗೊತ್ತಿಲ್ಲ. ಆದ್ರೆ ಪ್ರತಿ ವರ್ಷ ದಾಖಲೆಯಲ್ಲಿರುವ ಮೇ 13ರಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತೇನೆ. ಆದ್ರೆ ಈ ಬಾರಿ ಹುಟ್ಟುಹಬ್ಬದಂದು ತಾಯಂದಿರ ದಿನ ಬಂದಿದ್ದು ತುಂಬಾ ಖುಷಿಯನ್ನು ನೀಡಿದೆ. ಹಾಗಾಗಿ ಈ ಬಾರಿ ಹುಟ್ಟುಹಬ್ಬಕ್ಕಿಂತ ತಾಯಂದಿರ ದಿನವನ್ನು ಆಚರಿಸಲು ಇಷ್ಟಪಡುತ್ತೇನೆ. ಸದ್ಯ ತಾಯಿಯ ಜವಾಬ್ದಾರಿಗಳು ನನ್ನ ಮೇಲಿದ್ದು, ಮೂರು ಮಕ್ಕಳ ತಾಯಿ ಎಂಬ ಮಾತು ಯಾವಾಗಲೂ ನನ್ನ ಮನಸ್ಸಿನಲ್ಲಿರುತ್ತದೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ