ನಟಿ ಕತ್ರಿನಾ ಕೈಫ್ ವಿಪರೀತವಾದ ಕ್ರೇಜ್: ಜೀವವನ್ನೇ ಕಳೆದುಕೊಂಡ ಯುವಕ
ಬುಧವಾರ, 6 ಡಿಸೆಂಬರ್ 2023 (10:46 IST)
ವಿಷಯ ಇಷ್ಟೇ. ಕತ್ರಿನಾ ಕೈಫ್ ಮೇಲೆ ತನ್ನ ಪ್ರೀತಿ, ಲವ್ವು ಹೊಂದಿದ್ದ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಿನಿಮಾ ಕಲಾವಿದರಿಗಾಗಿ ಹೀಗೆಲ್ಲ ಮಾಡಿಕೊಳ್ತಾರಾ ಎನ್ನುವ ಬಗ್ಗೆ ಈಗ ಚರ್ಚೆ ಆರಂಭವಾಗಿದೆ.
ತನ್ನ ಅತಿ ಅಮೂಲ್ಯವಾದ ಬದುಕನ್ನು ಸಹ ಲೆಕ್ಕಿಸದೆ ಈ ರೀತಿಯ ನಿರ್ಧಾರ ಕೈಗೊಂಡ ಆತನ ಬಗ್ಗೆ ಈಗ ಆಶ್ಚರ್ಯ ಆರಂಭವಾಗಿದೆ. ಹೀಗೆ ಪ್ರಾಣತ್ಯಾಗ ಮಾಡಿಕೊಂಡ ಯುವಕನ ವಯಸ್ಸು 22 ವರ್ಷ. ಆತನಿಗೆ ಬಾಲಿವುಡ್ ನಟಿ ಕತ್ರಿನಾ ಬಗ್ಗೆ ವಿಪರೀತವಾದ ಕ್ರೇಜ್. ಆಕೆ ತನಗೆ ಸಿಗೋದಿಕ್ಕೆ ಸಾಧ್ಯವೇ ಇಲ್ಲ ಎಂದು ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ.
ಮುದ್ದು ಮುದ್ದಾದ ಸುಂದರಿ ತನ್ನ ಪಾಡಿಗೆ ತಾನು ಸಿನಿಮಾಗಳಲ್ಲಿ ನಟಿಸುತ್ತಾ ಈಗ ತನ್ನ ಪತಿ ಕೌಶಲ್ ಜೊತೆ ಹಾಯಾಗಿದ್ದಾಳೆ. ಆದರೆ ಆಕೆಯ ಮನ ಕಲಕುವ ಘಟನೆ ನಡೆದಿದೆ. ಆದರೆ ಈ ಘಟನೆ ಕಂಡವರಿಗೆ ಆಶ್ಚರ್ಯ ಆಗಿದ್ದಲ್ಲದೆ ಅಭಿಮಾನ ಏನೆಲ್ಲಾ ಮಾಡಿಸುತ್ತದೆ ಎನ್ನುವ ನಿರ್ಧಾರಕ್ಕೆ ಬರುವಂತಾಗಿದೆ.
ದೆಹಲಿಯ ನೊಯಿಡಾದಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ಹೆಸರು ರಾಹುಲ್ ಕುಮಾರ್ ಸಿಂಗ್. ಬಿಹಾರದ ಈ ಯುವಕ ಬಿಟೆಕ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಇಂಜಿನಿಯರಿಂಗ್ ಮಾಡುತ್ತಿದ್ದಾನೆ. ಬಿಟೆಕ್ ಓದುತ್ತಿರುವ ಈ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಕತ್ರಿನಾ ಕೈಫ್ ಗಾಗಿ!
ಆತನ ಮೃತ ದೇಹದ ಬಳಿ ಇದ್ದ ಡೆತ್ ನೋಟ್ನಲ್ಲಿ ಐಲವ್ ಯು ಕತ್ರಿನಾ ಒಂದಲ್ಲ ಒಂದುದಿನ ನಿನ್ನನ್ನು ನಾನು ಸೇರುತ್ತೇನೆ ಎಂದು ಬರೆದಿದ್ದಾನೆ. ಇದ್ಯಾಕೋ ಅತಿ ಆಯ್ತಲ್ವೆ ! ಛೆ ಆತನ ತಾಯಿತಂದೆ ಗೋಳು ಯಾರು ಕೇಳ್ತಾರೆ!