ಸ್ಯಾಮ್ ಬಹದ್ದೂರ್ ಸಿನಿಮಾ ನೋಡಿ ಮೆಚ್ಚಿದ ಸಚಿನ್ ತೆಂಡುಲ್ಕರ್

ಸೋಮವಾರ, 4 ಡಿಸೆಂಬರ್ 2023 (12:20 IST)
Photo Courtesy: Twitter
ಮುಂಬೈ: ವಿಕ್ಕಿ ಕೌಶಾಲ್ ನಾಯಕರಾಗಿರುವ ಸ್ಯಾಮ್ ಬಹದ್ದೂರ್ ಸಿನಿಮಾ ನೋಡಿದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮೆಚ್ಚುಗೆಯ ಮಾತನಾಡಿದ್ದಾರೆ.

ಪತ್ನಿ ಅಂಜಲಿ ಜೊತೆ ವಿಶೇಷ ಶೋ ವೀಕ್ಷಿಸಿದ ಸಚಿನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಹೊಗಳಿ ಬರೆದಿದ್ದಾರೆ. ಸಚಿನ್ ದಂಪತಿಗೆ ಸಿನಿಮಾ ವೀಕ್ಷಿಸಲು ಸ್ವತಃ ವಿಕ್ಕಿ ಕೌಶಾಲ್ ಜೊತೆಯಾಗಿದ್ದರು.

‘ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾವಿದು. ನಮ್ಮ ದೇಶದ ಇತಿಹಾಸವನ್ನು ನಾವು ತಿಳಿಯಲೇಬೇಕು. ಮತ್ತು ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಅವರ ಬಲಿದಾನವನ್ನು ನಾವು ತಿಳಿಯಬೇಕು. ವಿಕ್ಕಿ ಕೌಶಾಲ್ ಅದ್ಭುತವಾಗಿ ಅಭಿನಯಿಸಿದ್ದಾರೆ’ ಎಂದು ಸಚಿನ್ ಹಾಡಿಹೊಗಳಿದ್ದಾರೆ.

ಅನಿಮಲ್ ಸಿನಿಮಾ ಬಿಡುಗಡೆಯಾದ ದಿನವೇ ಸ್ಯಾಮ್ ಬಹದ್ದೂರ್ ಸಿನಿಮಾ ಕೂಡಾ ಬಿಡುಗಡೆಯಾಗಿತ್ತು. ಒಂದು ಅದ್ಭುತ ಸಿನಿಮಾವಾಗಿದ್ದರೂ ಅನಿಮಲ್ ಅಲೆಯಲ್ಲಿ ಸ್ಯಾಮ್ ಬಹದ್ದೂರ್ ಸಿನಿಮಾಗೆ ಕೊಂಚ ಹಿನ್ನಡೆಯಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ