ವಿಷ್ಣು ಸ್ಮಾರಕಕ್ಕೆ ಕಿಚ್ಚ ಜಾಗ ಕೊಟ್ರೇ, ಅಭಿಮಾನಿಗಳ ಸಂಘಟನೆ ಹೈಕೋರ್ಟ್ ಗೆ ಹೋಗೋದಾ
ಸರ್ಕಾರ ಯಾವ ಉದ್ದೇಶದಲ್ಲಿ ಬಾಲಣ್ಣ ಅವರಿಗೆ ಜಾಗ ನೀಡಿತ್ತೋ ಆ ಕೆಲಸಕ್ಕೆ ಉಪಯೋಗವಾಗದೆ ವ್ಯವಹಾರಿಕವಾಗಿ ಲಾಭದಾಸೆಗೆ ಬಾಲಣ್ಣ ಕುಟುಂಬ ಪ್ಲ್ಯಾನ್ ಮಾಡಿರೋದು ಬೇಸರ ತಂದಿದೆ.
ಜೊತೆಗೆ 10 ಗುಂಟೆ ಜಾಗವನ್ನ ವಾಪಸ್ ಪಡೆಯುವುದು, ಜೊತೆಗೆ ಸಮಾಧಿ ಮರುಸ್ಥಾಪನೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಲಾಗಿದೆ.
ಇದೀಗ ಸ್ಮಾರಕ ತೆರವುಗೊಳಿಸಿ ಹತ್ತು ದಿನಗಳೇ ಉರುಳಿದೆ. ಸೆಪ್ಟೆಂಬರ್ 18ರಂದು ನಡೆಯಬೇಕಿದ್ದ ವಿಷ್ಣುವರ್ಧನ್ 75ನೇ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭಾರೀ ಬೇಸರ ತಂದಿದ್ದು, ಇದೀಗ ಸಮಾಧಿ ತೆರವು ಮಾಡಿರುವ ಜಾಗದಲ್ಲಿ ಸಮಾಧಿ ಮರುಸ್ಥಾಪನೆ ಹಾಗೂ ಪರ್ಯಾಯ ಸ್ಮಾರಕ ಸ್ಥಾಪನೆಯೂ ಜಂಟಿಯಾಗಿ ನಡೆಯುತ್ತಿದೆ