ಪಡುಬಿದ್ರಿ: ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಅವರು ತಮ್ಮ ಕುಟುಂಬ ಸಮೇತರಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರರು. ಪಟ್ಟೆ ಸೀರೆ ಅರ್ಪಿಸಿದ ಶಿಲ್ಪಾಶೆಟ್ಟಿ ಅವರು ಕೆಲಹೊತ್ತು ದೇವಸ್ಥಾನದಲ್ಲಿ ಆವರಣದಲ್ಲಿ ಕೂತು ವಿಶೇಷ ಪ್ರಾರ್ಥನೆ ಮಾಡಿದರು.
ಸಹೋದರಿ ಶಮಿತಾ ಶೆಟ್ಟಿ, ತಾಯಿ ಹಾಗೂ ತಮ್ಮ ಇಬ್ಬರು ಮಕ್ಕಳೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದರು. ಅವರು ಇಂದು ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನಕ್ಕೆ ಭೇಟಿ ನೀಡಿದರು.
ನಂತರ ದೇವಸ್ಥಾನದಲ್ಲಿ ನಡೆಯಲಿರುವ ಢಕ್ಕೆ ಬಲಿ ಸೇವೆಗೆ ಮುಂಚಿತವಾಗಿ, ಪಂಚಾಮೃತ ಅಭಿಷೇಕದಲ್ಲಿ ಪಾಲ್ಗೊಳ್ಳಲು ನಟಿ ತನ್ನ ಕುಟುಂಬದೊಂದಿಗೆ ಬೆಳಿಗ್ಗೆ ಆಗಮಿಸಿದರು.
ಈ ಬಗ್ಗೆ ಶಮಿತಾ ಶೆಟ್ಟಿ ಅವರು ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡು, ನಮ್ಮ ಕುಲದೇವತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದೇವೆ ಎಂದು ಸರಣಿ ಫೋಟೋ ಹಂಚಿಕೊಂಡಿದ್ದಾರೆ.
ನಟಿ ಶಿಲ್ಪಾ ಶೆಟ್ಟಿ ಅವರು, ಮಂಗಳೂರಿಗೆ ಭೇಟಿ ನೀಡಿದಾಗಲೆಲ್ಲಾ ತಪ್ಪದೇ ಕಟೀಲು ಶ್ರೀ ದುರ್ಗಾಪರಮೇಶ್ವರಿ ದರ್ಶನ್ ಮಾಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಇಲ್ಲಿನ ಧಾರ್ಮಿಕ ಕಾರ್ಯಕ್ರಮದ ಆಹ್ವಾನಕ್ಕೂ ಅವರು ಮಿಸ್ ಮಾಡದೆ, ಭಾಗವಹಿಸುತ್ತಾರೆ.