ಎಂಡೊಮೆಟ್ರಿಯೊಸಿಸ್‌ ಸರ್ಜರಿಗೊಳಗಾದ ಶಮಿತಾ ಶೆಟ್ಟಿ, ಮಹಿಳೆಯರೆ ಜಾಗೃತೆ ಎಂದಿದ್ದೇಕೆ

Sampriya

ಗುರುವಾರ, 16 ಮೇ 2024 (17:25 IST)
Photo Courtesy X
ಮುಂಬೈ:  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹೋದರಿ, ನಟಿ ಶಮಿತಾ ಶೆಟ್ಟಿ ಅವರು ಈಚೆಗೆ ಎಂಡೊಮೆಟ್ರಿಯೊಸಿಸ್‌ಗೆ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡ ಅವರು,  ಹೆಂಗಸರು ದಯವಿಟ್ಟು ಗೂಗಲ್‌ನಲ್ಲಿ ಎಂಡೊಮೆಟ್ರಿಯೊಸಿಸ್ ಖಾಯಿಲೆ ಬಗ್ಗೆ ಸರ್ಚ್, ಅದರ ಬಗ್ಗೆ ನಿರ್ಲಕ್ಷ್ಯ ಬೇಡ ಎಂದಿದ್ದಾರೆ.

ಈ ಕಾಯಿಲೆ ಗಂಭೀರವಾದದ್ದು, ಇದು ಆಗಾಗ್ಗೆ ಪತ್ತೆಯಾಗುವುದಿಲ್ಲ ಮತ್ತು ಮಹಿಳೆಯರಲ್ಲಿ ತೀವ್ರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇನ್ನೂ ಈ ಬಗ್ಗೆ ನಟಿ ಆಸ್ಪತ್ರೆಯ ಬೆಡ್‌ನಿಂದ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ. ಅದರಲ್ಲಿ ಗೌನ್ ಮತ್ತು ಸರ್ಜರಿ ಕ್ಯಾಪ್‌ನಲ್ಲಿ ಕಾಣಿಸಿಕೊಂಡರು.

ಏನಿದು ಎಂಡೊಮೆಟ್ರಿಯೊಸಿಸ್ ಕಾಯಿಲೆ:

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಎಂಡೊಮೆಟ್ರಿಯೊಸಿಸ್ ಎನ್ನುವುದು ಮಹಿಳೆಯರಲ್ಲಿ ಕಂಡುಬರುವ ಕಾಯಿಲೆಯಾಗಿದ್ದು, ಇದರಲ್ಲಿ ಎಂಡೊಮೆಟ್ರಿಯಮ್‌ನಲ್ಲಿರುವಂತಹ ಜೀವಕೋಶಗಳು, ಗರ್ಭಾಶಯದ ಒಳಭಾಗವನ್ನು ಆವರಿಸುವ ಪದರ ಹೊರಗೆ ಬೆಳೆಯುತ್ತದೆ. ಇದರಿಂದಾಗಿ ಗರ್ಭಾಶಯದ ಸುತ್ತಲಿನ ಅಂಗಾಂಶ, ಅಂಡಾಶಯಗಳು ( ಪೆರಿಟೋನಿಯಮ್ ), ಕರುಳು ಮತ್ತು ಮೂತ್ರಕೋಶಗಳಲ್ಲಿ ಗಾಯಗಳು ಕಂಡು ಬರುತ್ತದೆ.
ಎಂಡೊಮೆಟ್ರಿಯೊಸಿಸ್​​ನ ರೋಗ ಲಕ್ಷಣಗಳು:

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ